CONTACT US:      kannadanet.com Karishma Digital studio jawahar road, Koppal-583 231

ಕರಿಷ್ಮಾ ಡಿಜಿಟಲ್ಸ್, ಜವಾಹರ ರಸ್ತೆ, ದುರ್ಗಮ್ಮ ಕಟ್ಟೆ ಹತ್ತಿರ ,ಕೊಪ್ಪಳ Phone: 9880257488 E-mail:   kannadanet@gmail.com,sirajbisaralli@in.com

ಮುಖಪುಟ    ಸಾಹಿತಿಗಳು   ಪ್ರತಿಸ್ಪಂದನೆ       ನಮ್ಮನ್ನು ಸಂಪರ್ಕಿಸಿ

    KOPPAL DIST COMPLETE INFORMATION AND NEWS

ಕನ್ನಡನೆಟ್.ಕಾಂ

Text Box: ಉತ್ತರ ಕರ್ನಾಟಕ ಮತ್ತು ಕೊಪ್ಪಳ ಜಿಲ್ಲೆಯ ಪ್ರಪ್ರಥಮ ಕನ್ನಡ  ಇ-ಪತ್ರಿಕೆ

Www.kannadanet.com

Web Design

Animation

Web Hosting

Animated

Simple

Attractive

Web Site for U

@ Best Price

Call 9880257488

Text Box: ನೀವೂ ಬರೆಯಿರಿ ಕನ್ನಡನೆಟ್.ಕಾಮ್ ಗೆ 
  ನಿಮ್ಮಲ್ಲಿರುವ ಕತೆ,ಕವನ, ಲೇಖನಗಳನ್ನು ಕನ್ನಡನೆಟ್.ಕಾಮ್ ನಲ್ಲಿ ಪ್ರಕಟಿಸುವುದಕ್ಕೆ  ನೀವು ಮಾಡಬೇಕಾಗಿರುವುದು ಇಷ್ಟೇ ನುಡಿ ಅಥವಾ ಬರಹ ದಲ್ಲಿ ಟೈಪ್ ಮಾಡಿದ ನಿಮ್ಮ ಲೇಖನವನ್ನು  kannadanet@gmail.com 
ವಿಳಾಸಕ್ಕೆ ಕಳುಹಿಸಿ

ಡಾ.ವಿ.ಬಿರಡ್ಡೇರ

ಬರಹಗಾರ,ಕವಿ

ಡಾ.ವಿ.ಬಿರಡ್ಡೇರ

Dr. V.B.Radder       Writer,Poet

 ಸಾಹಿತಿಗಳಾಗಿ ಹೆಸರು ಮಾಡಿರುವ ಡಾ.ವಿ.ಬಿ.ರಡ್ಡೇರ  ತಮ್ಮ ಹಲವಾರು ಲೇಖನಗಳು, ಕವನಗಳ  ಮೂಲಕ ಹೆಸರು ಮಾಡಿದ್ದಾರೆ.    ಉಪನ್ಯಾಸಕರಾಗಿ  ಹೆಸರು ಮಾಡಿರುವ  ಇವರು    ಉತ್ತಮ ಸಂಘಟಕರಾಗಿ ,  ಕಿರಿಯರಿಗೆ ಸ್ನೇಹಿತರಾಗಿ  , ಉತ್ತಮ ಮಾರ್ಗದರ್ಶಿಗಳಾಗಿ  ಹಲವಾರು  ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

 

ಡಾ. ವಿರೇಶ ರಡ್ಡೇರ   ( ಡಾ.ವಿ.ಬಿ.ರಡ್ಡೇರ)

 

ಜನನ :ಕೋಚಲಾಪುರ,ನರೇಗಲ್ ತಾ: ರೋಣ

 

ತಂದೆ  : ಬಸವರಡ್ಡೆಪ್ಪ

 

ತಾಯಿ ; ದೇವಕಿ

 

ವಿದ್ಯಾಭ್ಯಾಸ :  ಎಂ.ಎ. ಪಿ.ಹೆಚ್.ಡಿ ( ಕನ್ನಡ ವಿಶ್ವವಿದ್ಯಾಲಯ)

 

ವೃತ್ತಿ :   ಉಪನ್ಯಾಸಕರು ಪ್ರಸ್ತುತ ಸ.ಪ.ಪೂ ಕಾಲೇಜ ಕಿನ್ನಾಳ  ಪ್ರಾಚಾರ್ಯರು

 

ಸಂಘಟನೆಗಳು : ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ, ರಾಜ್ಯ ಸರಕಾರಿ  ನೌಕರರ ಸಂಘ, ಜಿಲ್ಲಾ ಶಾಖೆ ಕೊಪ್ಪಳದ ಕಾಲೇಜು ಶಿಕ್ಷಣದ ಪ್ರತಿನಿಧಿ ಮತ್ತು ರಾಜ್ಯ ಪರಿಷತ್ತ್ ಸದಸ್ಯರಾಗಿ ಆಯ್ಕೆ ಹಾಗೂ ಹಲವಾರು ಸಂಘ ,ಸಂಸ್ಥೆಗಳ ಗೌರವ ಸದಸ್ಯರಾಗಿದ್ದಾರೆ.

 

ಸಾಹಿತ್ಯ, ಕತೆ, ಕವನ ;  ವಿದ್ಯಾರ್ಥಿದೆಸೆಯಿಂದಲೇ ಬರವಣಿಗೆ ಆರಂಭಿಸಿದ್ದ  ಇವರ ಕತೆ, ಕವನಗಳು ಕರ್ನಾಟಕ ಭಾರತಿ ತ್ರೈಮಾಸಿಕ ಪತ್ರಿಕೆಗಳಲ್ಲಿ ಪ್ರಕಟ, ನಾಡಿನ ಹಲವಾರು ಪತ್ರಿಕೆಗಳಲ್ಲಿ ಲೇಖನ , ಕತೆ, ಕವನಗಳು ಪ್ರಕಟವಾಗಿವೆ.

            ಬೈರಪ್ಪನವರ ಕಾದಂಬರಿಗಳಲ್ಲಿ ಸಂಸ್ಕೃತಿ ಎಂಬ ಪಿಎಚ್ ಡಿ ಮಹಾಪ್ರಬಂಧವನ್ನು ಕನ್ನಡ ವಿಶ್ವವಿದ್ಯಾನಿಲಯಕ್ಕೆ ಅರ್ಪಿಸಿ ಪಿಎಚ್ ಡಿ ಪದವಿ ಪಡೆದುಕೊಂಡಿದ್ದಾರೆ. ಕೊಪ್ಪಳ  ಜಿಲ್ಲಾ ಮಟ್ಟದಲ್ಲಿ ಜರುಗಿದ ಹಲವಾರು ಹೋರಾಟದಲ್ಲಿ ನೇತೃತ್ವವನ್ನು ವಹಿಸಿಕೊಂಡು ಜನಜಾಗೃತಿ ಮೂಡಿಸಿದ್ದಾರೆ. ತುರ್ತುಪರಿಸ್ತಿತಿಯಲ್ಲಿ ಹೋರಾಟ ಮಾಡಿದ್ದಾರೆ.

 

ಸನ್ಮಾನ : ಕೊಪ್ಪಳ ಜಿಲ್ಲಾ ಆಡಳಿತದಿಂದ  ಉತ್ತಮ ಸಾಹಿತಿಗಳು ಮತ್ತು ಪ್ರಾಧ್ಯಾಪಕರು ಮತ್ತು ಆಡಳಿತಗಾರರು ಎನ್ನುವ ಗೌರವ ನೀಡಿ 2007ರ ಗಣರಾಜ್ಯೋತ್ಸವ ದಿನದಂದು ಸನ್ಮಾನಿಸಲಾಗಿದೆ. ನೇಹಾ ಸಾಂಸ್ಕೃತಿಕ ಸಂಸ್ಥೆ ಕೊಪ್ಪಳ, ತಿರುಳ್ಗನ್ನಡ ಕ್ರಿಯಾ ಸಮಿತಿ ಕೊಪ್ಪಳ, ಸ್ವರಭಾರತಿ ಗ್ರಾಮೀಣ ಸಂಸ್ಥೇ ಕೊಪ್ಪಳ, ಸರಸ್ವತಿ ವಿದ್ಯಾಲಯ ಕೊಪ್ಪಳ ಮುಂತಾದ ಸಂಘ ಸಂಸ್ಥೆಗಳಿಂದ ಸನ್ಮಾನಿಸಿ ಗೌರವಿಸಲಾಗಿದೆ.