|
CONTACT US: kannadanet.com Karishma Digital studio jawahar road, Koppal-583 231 ಕರಿಷ್ಮಾ ಡಿಜಿಟಲ್ಸ್, ಜವಾಹರ ರಸ್ತೆ, ದುರ್ಗಮ್ಮ ಕಟ್ಟೆ ಹತ್ತಿರ ,ಕೊಪ್ಪಳ Phone: 9880257488 E-mail: kannadanet@gmail.com,sirajbisaralli@in.com |
|
ಮುಖಪುಟ ಸಾಹಿತಿಗಳು ಪ್ರತಿಸ್ಪಂದನೆ ನಮ್ಮನ್ನು ಸಂಪರ್ಕಿಸಿ |
|
KOPPAL DIST COMPLETE INFORMATION AND NEWS |
|
ಕನ್ನಡನೆಟ್.ಕಾಂ |
|
Www.kannadanet.com |

|
ಉತ್ತರ ಕರ್ನಾಟಕ ಪ್ರದೇಶ ರೈತ ಸಂಘ |
|
Uttar Karnataka Pradesh Rait Sangha Kendra valaya : CMC Complex, Opp. New Busstand, Koppal-583 231. ಕೇಂದ್ರ ವಲಯ: ಸಿ ಎಂಸಿ ಕಾಂಪ್ಲೆಕ್ಸ್, ಹೊಸ ಬಸ್ ನಿಲ್ದಾಣ ಎದುರಿಗೆ,ಕೊಪ್ಪಳ-583 231. |
|
ಉತ್ತರ ಕರ್ನಾಟಕ ಪ್ರದೇಶ ರೈತ ಸಂಘ ಸ್ಥಾಪನೆ ಮತ್ತು ಅಸ್ತಿತ್ವ |
|
ಉದ್ದೇಶಿತ ಯೋಜನೆಗಳು · ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ · ಅತಿ ಕಡುಬಡವ ಹೆಚ್ಐವಿ/ ಏಡ್ಸ್ ಪುನರ್ವಸತಿ · ಬಂಜರು ಭೂಮಿ ಅಭಿವೃದ್ದಿ ಯೋಜನೆ |
|
ಸಂಘದ ಕಾರ್ಯ ಚಟುವಟಿಕೆಗಳು ಮುಖ್ಯವಾಗಿ ತುಳಿತಕ್ಕೊಳಗಾದ ಗ್ರಾಮೀಣ ರೈತರ ಹಾಗೂ ಕೂಲಿ ಕಾರ್ಮಿಕರ ನೊಂದ ಮನಸ್ಸಿಗೆ ಸಾಂತ್ವನ ನೀಡಿ ಅವರ ಸಮಸ್ಯೆಗೆ ಸ್ಪಂದಿಸುವದೇ ಸಂಘದ ಮೂಲ ಧ್ಯೇಯ. · ರೈತರನ್ನು ಒಗ್ಗೂಡಿಸಿ ಸಂಘಟನೆಯಲ್ಲಿ ಕರೆತರುವುದು. · ಅನ್ಯಾಯದಿಂದ ಕಂಗಾಲಾದ ರೈತರ ನೆರವಿಗೆ ಧಾವಿಸುವುದು. · ತುಳಿತಕ್ಕೊಳಗಾದವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು. · ನಾಗರಿಕ ಹಕ್ಕುಗಳ ಬಗ್ಗೆ ತಿಳುವಳಿಕೆ ನೀಡುವುದು · ವೃದ್ದರು ಹಾಗೂ ಮಕ್ಕಳಿಗೆತೊಂದರೆಯಾಗದಂತೆ ಸಾಮಾಜಿಕ ಮೌಲ್ಯವನ್ನು ಕಾಪಾಡಲು ಕೌಟುಂಬಿಕ ತಿಳುವಳಿಕೆ ನೀಡುವುದು · ಮಹಿಳೆಯರ ಗೌರವ ಹಾಗು ಹಕ್ಕುಗಳ ಬಗ್ಗೆ ವಿಚಾರಗೋಷ್ಠಿಗಳು ಹಾಗೂ ತಿಳುವಳಿಕೆ ಕಾರ್ಯಕ್ರಮಗಳು · ರೈತರಿಗಾಗಿ ಇರುವ ಸರಕಾರಿ ಯೋಜನೆಗಳ ಬಗ್ಗೆ ಗ್ರಾಮೀಣ ರೈತರಿಗೆ ಸಂಘಟನೆಯ ಮುಖಾಂತರ ತಿಳುವಳಿಕೆ ನೀಡುವುದು · ಕಾಯಕವೇ ಕೈಲಾಸದ ಪರಿಕಲ್ಪನೆಯನ್ನು ಗ್ರಾಮೀಣ ಯುವ ಜನತೆಯಲ್ಲಿ ತುಂಬಿ ಅವರನ್ನು ಸ್ವಯಂ ಉದ್ಯೋಗದಲ್ಲಿ ತೊಡಗಿಸಿ ಅವರಿಗೆ ಬೇಕಾದ ಮಾರ್ಗದರ್ಶನ ಮಾಡುವುದು · ಸಂಘದ ವತಿಯಿಂದ ಅನ್ಯಾಯದ ವಿರುದ್ದ ಹೋರಾಟಗಳನ್ನು ನಡೆಸುವುದು . · ಕಾಯಿಲೆ ಪೀಡಿತರಿಗೆ ಸರಕಾರಿ ಸೌಲಭ್ಯವನ್ನು ಒದಗಿಸುವುದು ಮತ್ತು ರೋಗಿಗಳ ಪುನರ್ವಸತಿ ಯೋಜನೆ. · ಹೆಚ್ ಐವಿ/ ಎಡ್ಸ್ ತಡೆಗೆ ಪ್ರಚಾರ ಕಾಲಂನ ಕ್ರಮಗಳು. · ಕುಷ್ಠರೋಗಿಗಳ ಮಾನಸಿಕ ಅಸ್ವಸ್ಥರಿಗೆ ಅವರ ಕುಟುಂಬದ ಸಹಕಾರದೊಂದಿಗೆ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವುದು. · ಬಂಜರು ಭೂಮಿಯನ್ನು ಅಭಿವೃದ್ದಿಗೊಳಿಸುವ ಅತ್ಯಂತ ಮಹತ್ವದ ಯೋಜನೆಯನ್ನು ಜನರಿಗೆ ಮನವರಿಕೆ ಮಾಡಿಕೊಡುವುದು. · ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಇರುವ ವೈಜ್ಞಾನಿಕ ರೀತಿಗಳನ್ನು ರೈತರಿಗೆ ತಿಳಿಸುವುದು. · ಅಂತರ್ಜಲ ಹೆಚ್ಚಿಸುವ ವಿಧಿ ವಿಧಾನಗಳನ್ನು ಅನುಷ್ಠಾನಗೊಳಿಸುವ ತಿಳುವಳಿಕೆ ನೀಡುವ ಕಾರ್ಯಗಾರ ನಡೆಸುವುದು · ಗ್ರಾಮೀಣ ರೈತರಿಗೆ ಭೂ ಹಕ್ಕುಗಳ ಕುರಿತು ತಿಳುವಳಿಕೆ ನೀಡುವುದು. |











