CONTACT US:      kannadanet.com Karishma Digital studio jawahar road, Koppal-583 231

ಕರಿಷ್ಮಾ ಡಿಜಿಟಲ್ಸ್, ಜವಾಹರ ರಸ್ತೆ, ದುರ್ಗಮ್ಮ ಕಟ್ಟೆ ಹತ್ತಿರ ,ಕೊಪ್ಪಳ Phone: 9880257488 E-mail:   kannadanet@gmail.com,sirajbisaralli@in.com

ಮುಖಪುಟ    ಸಾಹಿತಿಗಳು   ಪ್ರತಿಸ್ಪಂದನೆ       ನಮ್ಮನ್ನು ಸಂಪರ್ಕಿಸಿ

    KOPPAL DIST COMPLETE INFORMATION AND NEWS

ಕನ್ನಡನೆಟ್.ಕಾಂ

Text Box: ಉತ್ತರ ಕರ್ನಾಟಕ ಮತ್ತು ಕೊಪ್ಪಳ ಜಿಲ್ಲೆಯ ಪ್ರಪ್ರಥಮ ಕನ್ನಡ  ಇ-ಪತ್ರಿಕೆ

ಮಹಾಂತೇಶ ಮಲ್ಲನಗೌಡರ

ಸಾಹಿತಿ,ಸಂಘಟಕ

           ಸೂಕ್ಷ್ಮ ಹೃದಯವ್ಯಕ್ತಿತ್ವದಿಂದ , ಚೇತನಮಯ ಸಾಹಿತ್ಯ ರಚನೆಗಳಿಂದ ಕ್ರೀಯಾಶೀಲ ಸಾಂಸ್ಕತಿಕ ಚುಟುವಟಿಕೆಗಳಿಂದ ಸದಾ ಒಂದಿಲ್ಲೊಂದು ರಚನೆ, ಸಂಘಟನೆಗಯಲ್ಲಿ ತೊಡಗಿರುವ ಮಹಾಂತೇಶ ಮಲ್ಲನಗೌಡರು ಅಪ್ಪಟ ಗ್ರಾಮೀಣ ಪ್ರತಿಭೆ. ಕಾವ್ಯ ,ವೈಚಾರಿಕತೆ, ತತ್ವಜ್ಞಾನ ಮತ್ತು ಚಲನಚಚಿತ್ರಗಳಲ್ಲಿ ತುಂಬಾ ಆಸಕ್ತರು. ವೈವಿದ್ಯಮಯ ರಂಗಗಳ ಚಟುವಟಿಕೆಯ ನಡುವೆ ಸಾಂಸ್ಕೃತಿಕ ಲೊಕದ ಸಂಘಟಕರಾಗಿ ಯುವ ಪ್ರತಿಭೆಗಳಿಗೆ ಪ್ರೇರಕ , ಮಾರ್ಗದರ್ಶಕರಾಗಿದ್ದಾರೆ.

     1-6-1954ರಂದು  ಗದಗ ಜಿಲ್ಲಾ ರೋಣ ತಾಲೂಕಿನ ನರೇಗಲ್ ಮಲ್ಲಾಪುರ ಗ್ರಾಮದಲ್ಲಿ ಜನನ.

ವಿದ್ಯಾಭ್ಯಾಸ : ಬಿ.ಎ.ಎಂ.ಎ( ಇಂಗ್ಲೀಷ್ ) ಕರ್ನಾಟಕ ವಿಶ್ವವಿದ್ಯಾಲಯ 1926ರಲ್ಲಿ.   ವೃತ್ತಿ : ಉಪನ್ಯಾಸಕರು   ಗಂಗಾವತಿ, ರಾಯಭಾಗ, ಗುಲಬರ್ಗಾ, ನಾಲತವಾಡ, ಸಿಂಧನೂಊರ, ಹಾಸನ, ಕೊಪ್ಪಳ., ಶಿವಮೊಗ್ಗ , ತಳಕಲ್ ಕಾಲೇಜುಗಳಲ್ಲಿ ಸೇವೆ ಸಲ್ಲಿ ಸದ್ಯ ಪದವಿ ಪೂರ್ವ ಕಾಲೇಜು ಬೇವೂರಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಕಟಿತ ಕೃತಿಗಳು : ಚಿಗುರು ( ಹಾಸನ ಜಿಲ್ಲಾ ಉದಯೋನ್ಮುಖ ಕವಿಗಳ ಸಂಪಾದಿತ ಕವನ ಸಂಕಲನ 1985), ಯುಟೋಪಿಯಾ ( ಕನ್ನಡ ಕಥೆಗಳು 1986), ಇಂಚರ ( ಕವನಗಳು, ಚುಟುಕುಗಳು 1986), ಪರಿವರ್ತನೆ ( ಕನ್ನಡ ಕವನಗಳು 1989), ಸ್ಪಂದನ ( ಕನ್ನಡ ಭಾವಗೀತೆಗಳು 1991), ಪರಾಗ ( ಕನ್ನಡ ಭಾವಗೀತೆಗಳು 1993), ಹಾಡಿನ ಕೋಗಿಲೆ ( ಭಾವಗೀತೆಗಳು -1999), ಲೆಟ್ ದೇರ್ ಬೀ ಲೈಟ್ (  ಇಂಗ್ಲೀಷ್ ಬರಹಗಳ ಸಂಕಲನ 2002), ಕವನಗಳಲ್ಲಿ ಕುವೆಂಪು ( ಕುವೆಂಪು ಕುರಿತ ಬರೆದ ಕವನಗಳ ಸಂಪಾದಿತ ಕವನ ಸಂಕಲನ 2004), ಭಾನಂಗಳದ ಚುಕ್ಕಿಗಳು   (ಮಿನಿಗವನಗಳು 2004), ಕೊಪಣ ಕಾವ್ಯ ( ಕೊಪ್ಪಳ ಜಿಲ್ಲಾ ಕವಿಗಳ ಸಂಪಾದಿತ ಕವನ ಸಂಕಲನ 2006)

 ಚಲನಚಿತ್ರಗಳಲ್ಲಿಯೂ ಸಾಧನೆ ತೋರಿರುವ  ಮಲ್ಲನಗೌಡರು ಕೆ.ಶಿವರಾಮು, ಪ್ರಸನ್ನಾಕ್ಷಿ, ಮಧುರಾ ಆಬಿನಯದ ಶಂಕರ ಸುಗ್ನಳ್ಳಿ ನಿರ್ದೇಶನದ  ಓ ಪ್ರೇಮದೇವತೆ ಚಿತ್ರಕ್ಕೆ ಸಾಹಿತ್ಯ ರಚನೆ.

ಚುಂಬನ ಭಾವಗೀತೆಗಳ ಧ್ವನಿ ಸುರಳಿ ( 1994)

ಅತ್ಯುತ್ತಮ ಸಂಘಟನಕಾರರಾಗಿರುವ ಮಲ್ಲನಗೌಡರು  ಬರಹಗಾರರಾಗಿ ಅಷ್ಟೇ ಅಲ್ಲದೇ ಹಲವಾರು ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಅವರು ನಿರ್ವಹಿಸಿದ ಹುದ್ದೆಗಳು.

ಕಾರ್ಯದರ್ಶಿ : ಮಂಗಳಾ ಕಲಾ ಸಾಹಿತ್ಯ  ವೇದಿಕೆ, ಹಾಸನ, ಸಂಚಾಲಕರು ಸಂಕ್ರಮಣ ವೇದಿಕೆ, ಕೊಪ್ಪಳ, ಕಾರ್ಯದರ್ಶಿ, ಜೆ ಸಿ ಕ್ಲಬ್ ಕೊಪ್ಪಳ, ಅಧ್ಯಕ್ಷರು  ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ, ಅಧ್ಯಕ್ಷರು ರಾಯಚೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಕೊಪ್ಪಳ, ಅಧ್ಯಕ್ಷರು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಕೊಪ್ಪಳ, ಸಂಚಾಲಕರು ಕನ್ನಡ ಸಾಂಸ್ಕೃತಿಕ ವೇದಿಕೆ ಕೊಪ್ಪಳ.

    ಸಧ್ಯ ನೇಹ ಸಾಂಸ್ಕೃತಿಕ ವೇದಿಕೆ ಕೊಪ್ಪಳ  ಇದರ ಅಧ್ಯಕ್ಷರಾಗಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಶಸ್ತಿ : ಸನ್ಮಾನಗಳು : 1995ರಲ್ಲಿ ಕೊಪ್ಪಳ  ಗಣರಾಜ್ಯೋತ್ಸವದಲ್ಲಿ ಸನ್ಮಾನ, ರಾಯಚೂರು ಜಿಲ್ಲಾ ಗಣರಾಜ್ಯೋತ್ಸವದಲ್ಲಿ 1997ರಲ್ಲಿ ರಾಯಚೂರಿನಲ್ಲಿ ಸನ್ಮಾನ, ಡಾಕ್ಟರ್ ಆಫ್ ಫಿಲಾಸಫಿ ಇನ್ ಲಿಟರೇಚರ್ ಪದವಿ ( ಹಾರ್ಮೋನಿ ಕಾಲೇಜ್  ಆಫ್ ಅಪ್ಲೈಡ್ ಸೈನ್ಸ್ ಇಂಟರ್ ನ್ಯಾಷನಲ್ ಯುನಿವರ್ಸಿಟಿ ಅಮೇರಿಕಾ ಇವರಿಂದ),ಡಾ. ಬಾಬಾ ಸಾಹೇಬ ಅಂಬೇಡ್ಕಡ್ ಸಮಾಜ ಸೇವೇ ಪುರಸ್ಕಾರ ( ಮಹಾರಾಷ್ಟ್ರ ದಲಿತ ಸಾಹಿತ್ಯ ಅಕಾಡೆಮಿ, ಭುಸಾವಳ ವ ಇವರಿಂದ 2000) , ಕೊಪ್ಪಳ ತಾಲೂಕ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ( ಫೆ 24 2002), ಮೈಸೂರು ದಸರಾ ಕವಿಗೋಷ್ಠಿ 2003, ಕನ್ನಡ ಸಾಹಿತ್ಯ ಪರಿಷತ್ ಕೊಪ್ಪಳ ತಾಲೂಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ 14-2-2004), ಅಮೇರಿಕನ್ ಬಯೋಗ್ರಾಫಿಕಲ್ ಇನ್ ಸ್ಟಿಟ್ಯೂಟ್ ಇವರ ರಿಸರ್ಚ್ ಬೋರ್ಡ ಆಫ್ ಅಡ್ವೈಜರ್ಸ್ ಗೌರವ ಸದಸ್ಯರಾಗಿ ನಾಮಕರಣ , ಬಿದರಿನಲ್ಲಿ ಜನೇವರಿ 2006ರಲ್ಲಿ ನಡೆದ ಅಖಿಲ ಭಾಋತ 72ನೇ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ , ಕನ್ನಡ ಜಾಗೃತಿ ವೇದಿಕೆ ಬೆಂಗಳೂರು ಹಾಗೂ ವಾಸ್ಕೋ ಕನ್ನಡ ಸಂಘ ವಾಸ್ಕೋ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡಿಗರ ಸಾಹಿತ್ಯ ಮತ್ತು ಸಂಸ್ಕೃಇ ಸಮ್ಮೇಳನ 2006 ಸಮ್ಮೇಳನ ಅಧ್ಯಕ್ಷತೆ.ಕೊಪ್ಪಳ ಜಿಲ್ಲಾ ದ್ವಿತಿಯ ಚುಟುಕು ಸಾಹಿತ್ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ 2007, ಹನುಮಸಾಗರದಲ್ಲಿ ನಡೆದ ಕೊಪ್ಪಳ ಜಿಲ್ಲಾ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ( 2007),

    ಮಹಾಂತೇಶ ಮಲ್ಲನಗೌಡರ್ ರವರು ಗುಲಬರ್ಗಾ ಆಕಾಶವಾಣಿ ಅನುಮೋಧಿತ ಕವಿಯಾಗಿದ್ದು, ಅವರ ಕವನಗಳು ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಪ್ರಸಾರವಾಗುತ್ತಾ ಇರುತ್ತವೆ.

ಮಹಾಂತೇಶ ಮಲ್ಲನಗೌಡರ  Mahantesh Mallanagouder

ಮಹಾಂತೇಶ ಮಲ್ಲನಗೌಡರ

Www.kannadanet.com