CONTACT US:      kannadanet.com Karishma Digital studio jawahar road, Koppal-583 231

ಕರಿಷ್ಮಾ ಡಿಜಿಟಲ್ಸ್, ಜವಾಹರ ರಸ್ತೆ, ದುರ್ಗಮ್ಮ ಕಟ್ಟೆ ಹತ್ತಿರ ,ಕೊಪ್ಪಳ Phone: 9880257488 E-mail:   kannadanet@gmail.com,sirajbisaralli@in.com

ಮುಖಪುಟ    ಸಾಹಿತಿಗಳು   ಪ್ರತಿಸ್ಪಂದನೆ       ನಮ್ಮನ್ನು ಸಂಪರ್ಕಿಸಿ

    KOPPAL DIST COMPLETE INFORMATION AND NEWS

ಕನ್ನಡನೆಟ್.ಕಾಂ

Text Box: ಉತ್ತರ ಕರ್ನಾಟಕ ಮತ್ತು ಕೊಪ್ಪಳ ಜಿಲ್ಲೆಯ ಪ್ರಪ್ರಥಮ ಕನ್ನಡ  ಇ-ಪತ್ರಿಕೆ

Www.kannadanet.com

ಹನುಮಂತಪ್ಪ ಅಂಡಗಿ ಚಿಲವಾಡಗಿ ಸಾಹಿತಿ,ಜಾನಪದ ಕಲಾವಿದ,ಸಂಘಟಕ

ಹನುಮಂತಪ್ಪ ಅಂಡಗಿ ಶಿಕ್ಷಕರಾಗಿ, ಜಾನಪದ ಗಾಯಕರಾಗಿ, ಸಂಘಟಕರಾಗಿ ಕೊಪ್ಪಳ ಜಿಲ್ಲೆಯ ತುಂಬೆಲ್ಲಾ ಹೆಸರುವಾಸಿಯಾಗಿದ್ದಾರೆ. ಚುಟುಕು ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಿ  ಗಮನಾರ್ಹ ಕಾರ್ಯ ಮಾಡಿದ್ದಾರೆ.

ಜನನ : ಕೊಪ್ಪಳ ತಾಲೂಕಿನ  ಇಂದರಗಿಯಲ್ಲಿ 1-6-1971 . ತಂದೆ : ನಿಂಗಪ್ಪ ಅಂಡಗಿ ತಾಯಿ : ಸಿದ್ದಮ್ಮ ಅಂಡಗಿ.

ವಿದ್ಯಾಭ್ಯಾಸ : ಬಿ.ಎ.ಬಿ.ಈಡಿ, ಎಂ.ಎ.ಎ.ಈಡಿ. ಪಿಜಿಡಿ ಹೆಚ್.ಇ.

ಜಾನಪದ ಹಾಡುಗಾರಿಕೆಯ ಜೊತೆಗೆ ಉತ್ತಮ ಸಂಘಟನಾ ಚತುರರು, ಸತತ ಪ್ರಯತ್ನವಾದಿ, ಪಾದರಸದಂತೆ ಸದಾ ಕ್ರೀಯಾಶೀಲ.

ಸಂಘಟನೆಗಳು :

· ಕೊಪ್ಪಳದ ಡಾ.ಸಿದ್ದಯ್ಯ ಪುರಾಣಿಕ ಸಾಹಿತ್ಯ ವೇದಿಕೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ

· ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾಗಿ, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕೊಪ್ಪಳ ಜಿಲ್ಲಾ ಶರಣ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ, ಕೊಪ್ಪಳ ಜಿಲ್ಲಾ ಬೀರಲಿಂಗೇಶ್ವರ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ,  ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರಾಗಿ, ಹೈದ್ರಾಬಾದ ಕರ್ನಾಟಕ  ಮಂಟಪದ ಪ್ರಧಾನ ಕಾರ್ಯದರ್ಶಿಯಾಗಿ, ಕೊಪ್ಪಳ ತಾಲೂಕ ಪ್ರೌಡಶಾಲಾ ಸಹಶಿಕ್ಷಕರ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ, ಕೊಪ್ಪಳ ಜಿಲ್ಲಾ ವಿಕಾಸ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯ.

 ಕೊಪ್ಪಳ ಜಿಲ್ಲಾ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನವನ್ನು ಅಗಷ್ಟ್ 25, 2002 ರಂದು ಹಮ್ಮಿಕೊಂಡಿದ್ದರು. ಚುಟುಕು ಸಿರಿ ಸ್ಮರಣ ಸಂಚಿಕೆ ಸಂಪಾದನೆ. ಮಾರ್ಚ 13,14– 2004ರಂದು ಕೊಪ್ಪಳದಲ್ಲಿ ರಾಜ್ಯಮಟ್ಟದ 14ನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡು  ಚುಟುಕು ಚಿಲುಮೆ ಸ್ಮರಣ ಸಂಚಿಕೆ ಹೊರತಂದಿದ್ದಾರೆ. ಕೊಪ್ಪಳ ಜಿಲ್ಲಾ ಪ್ರಥಮ ಜಾನಪದ ಕಲಾಮೇಳದ ಯಶಸ್ವಿಯಲ್ಲಿ ಪ್ರಮುಖ ಪಾತ್ರವಹಿಸಿ ಜಾನಪದ ಸಿರಿ ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ ಸೇವೆ. ಕೊಪ್ಪಳದ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೊತ್ಸವದ ನಿಮಿತ್ಯ ಹೊರತಂದ ಜ್ಞಾನದಿಪ್ತಿ ಸ್ಮರಣ ಸಂಚಿಕೆಯ ಸಹ ಸಂಪಾದಕರಾಗಿ ಕೆಲಸ ನಿರ್ವಹಣೆ. 25-8-2007ರಂದು ಕೊಪ್ಪಳದಲ್ಲಿ ನಡೆದ ಕೊಪ್ಪಳ ಜಿಲ್ಲಾ 2ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳ ಆಶೀರ್ವಚನಗಳ ಸಂಗ್ರಹ ಗವಿಸಿರಿ ಪುಸ್ತಕ ಪ್ರಕಟಣೆ. 2006ರ ಡಿಸೆಂಬರ್ 17 ರಿಂದ 19ರವರೆಗೆ ನಡೆದ  ಇಟಗಿ ಉತ್ಸವದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆ , ಸಾಂಸ್ಕೃತಿಕೋತ್ಸವದ ಅಧ್ಯಕ್ಷತೆ.

 ಮಾದಿನೂರ  ಉತ್ಸವ, ಆನೆಗೊಂದು ಉತ್ಸವ, ಕನಕಗಿರಿ ಉತ್ಸವ,  ಇಟಗಿ ಉತ್ಸವ, ಕಮ್ಮಟದುರ್ಗೋತ್ಸವ  ಹೀಗೆ ಹಲವಾರು ಉತ್ಸವಗಳಲ್ಲಿ ಜಾನಪದ ಗೀತೆಗಳನ್ನು ಹಾಡಿ  ರಂಜಿಸಿದ್ದಾರೆ.

ಪ್ರಶಸ್ತಿ ಪುರಸ್ಕಾರ :

· 2003-04ನೇ ಸಾಲಿನ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ ಸಾರ್ವಜನಿಕ ಶಿಕ್ಷಣ  ಇಲಾಖೆಯವತಿಯಿಂದ. ಬೆಂಗಳೂರಿನ 

· ರಾಜ್ಯಮಟ್ಟದ ರುಕ್ಮಿಣಿಬಾಯಿ ಸ್ಮಾರಕ ಪ್ರಶಸ್ತಿ. 16-7-2006ರಂದು ಕನಕಶ್ರೀ ಪ್ರಶಸ್ತಿ .

· 2006ನೇ ಸಾಲಿನ ರಾಜ್ಯಮಟ್ಟದ ಬಸವಜ್ಯೋತಿ ಪ್ರಶಸ್ತಿ

· 2006ರ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ  ಸುವರ್ಣ ಕನ್ನಡಿಗ ಪ್ರಶಸ್ತಿ.

· ಬೆಂಗಳೂರಿನ ಪತ್ರಕರ್ತರ ವೇದಿಕೆಯವತಿಯಿಂದ ರಾಜ್ಯಮಟ್ಟದ ಜನಪ್ರಿಯ ಶಿಕ್ಷಕ ಪ್ರಶಸ್ತಿ  2007ರಲ್ಲಿ.

· ಹೈದ್ರಾಬಾದ್ ಕರ್ನಾಟಕ ನಾಗರಿಕರ ವೇದಿಕೆವತಿಯಿಂದ ರಾಜ್ಯಮಟ್ಟದ ಶ್ರೀ ಕೃಷ್ಣದೇವರಾಯ ಪ್ರಶಸ್ತಿ.

· ಬೆಂಗಳೂರಿನ ಕರ್ನಾಟಕ ಜನತಾ ಸೇವಾದಳ  ಜೆಎಸ್ ಡಿ  ಸಾಂಸ್ಕೃತಿಕ ಘಟಕದವತಿಯಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ  ಪ್ರಶಸ್ತಿ.

· 2007ರಲ್ಲಿ ಜಗದ್ಗುರು ಶ್ರೀ ಗವಿಸಿದ್ಧೇಶ್ವರ ಜಿಲ್ಲಾ ಮಟ್ಟದ ಯುವ ಪುರಸ್ಕಾರ ಪ್ರಶಸ್ತಿ.

·  ಜಿಲ್ಲಾ ವಿಕಾಸ ಪರಿಷತ್ ಕೊಪ್ಪಳ ಿವರದ ವತಿಯಿಂದ ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ.

· ಸೆಪ್ಟಂಬರ 5, 2008ರಂದು ಸಾರ್ವಜನಿಕ ಶಿಕ್ಷಣ  ಇಲಾಖೆಯವತಿಯಿಂದ ಕೊಪ್ಪಳ ಜಿಲ್ಲಾ ಅತ್ಯುತ್ತ ಶಿಕ್ಷಕ ಪ್ರಶಸ್ತಿ.

 ಅಖಿಲ ಕರ್ನಾಟಕ ಜಾನಪದ ಕಲಾವಿದರ  ಒಕ್ಕೂಟದ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ನೇಮಗೊಂಡಿದ್ದಾರೆ. ಪ್ರಸ್ತುತ ಹಿರೇಸಿಂದೋಗಿಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಪ್ರಭಾರಿ ಪ್ರಾಚಾರ್ಯರಾಗಿ ಸೇವೆ.

 

ಹನುಮಂತಪ್ಪ ಅಂಡಗಿ ಚಿಲವಾಡಗಿ

Hanumantappa Andagi chilawadgi