|
ದಿ.ಗವಿಸಿದ್ಧ ಎನ್.ಬಳ್ಳಾರಿ |
|
ಮುಖಪುಟ ಸಾಹಿತಿಗಳು ಪ್ರತಿಸ್ಪಂದನೆ ನಮ್ಮನ್ನು ಸಂಪರ್ಕಿಸಿ |
|
Kannadanet.com KOPPAL DIST COMPLETE INFORMATION AND NEWS |
|
ಕನ್ನಡನೆಟ್.ಕಾಂ |
|
ದಿ.ಗವಿಸಿದ್ಧ ಎನ್.ಬಳ್ಳಾರಿ ಪತ್ರಕರ್ತ,ಸಾಹಿತಿ,ಹೋರಾಟಗಾರರು |
|
ಕೊಪ್ಪಳದ ನಾಡ ಕವಿ ಎಂದೇ ಪ್ರಸಿದ್ಧಿ ಪಡೆದ ಜನಾನುರಾಗಿ ಮತ್ತು ಹೋರಾಟಗಾರ ಕವಿ ಗವಿಸಿದ್ಧ ಎನ್.ಬಳ್ಳಾರಿಯವರು. ಕೊಪ್ಪಳದಲ್ಲಿ ನಡೆದ ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದವರು. ಇವರ ಜನನ ದಿ. 17-6-1950ರಲ್ಲಿ ಕೊಪ್ಪಳದಲ್ಲಿ. ತಂದೆ ತಾಯಿ : ವೃತ್ತಿಯಲ್ಲಿ ಪತ್ರಕರ್ತರಾಗಿ ಪ್ರವೃತ್ತಿಯಲ್ಲಿ ಕವಿಗಳಾಗಿದ್ದವರು. ಬಿಎಸ್ಸಿ ಪದವಿಯನ್ನು ಹುಬ್ಬಳ್ಳಿಯಲ್ಲಿ ಪಡೆದ ಇವರು ಎಂ. ಎ. ಕನ್ನಡ ವಿಷಯದಲ್ಲಿ ಸ್ನಾತಕ ಪದವಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದವರು. ಸಂಯುಕ್ತ ಕರ್ನಾಟಕ ಮತ್ತು ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರರಾಗಿ ಕೆಲವು ವರ್ಷ ಸೇವೆ ಸಲ್ಲಿಸಿದರು. ಗೋಕಾಕ ಚಳುವಳಿ, ಕುದರಿಮೋತಿ ಚಳುವಳಿ ಮತ್ತು ಕೊಪ್ಪಳ ಜಿಲ್ಲಾ ಹೋರಾಟದಲ್ಲಿ ಭಾಗವಹಿಸಿ ಹೋರಾಟ ಮಾಡಿದ್ದರು. ಇವರು ಪ್ರಕಟಿಸಿದ ಕೃತಿಗಳು ಕತ್ತಲು ದೇಶದ ಪದ್ಯಗಳು (1977), ಕಪ್ಪುಸೂರ್ಯ (1984), ಈ ಮಣ್ಣು ಅಪ್ಪಿಕೊಳ್ಳುವ ಮುನ್ನ (2004)ರಲ್ಲಿ . ಕಪ್ಪು ಸೂರ್ಯಕ್ಕೆ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪ್ರೋತ್ಸಾಹ ಬಹುಮಾನ ದೊರೆತಿದೆ. ಈ ಮಣ್ಣು ಅಪ್ಪಿಕೊಳ್ಳುವ ಮುನ್ನ ಕವನ ಸಂಕಲನಕ್ಕೆ ಕಣವಿ ಕಾವ್ಯ ಪ್ರಶಸ್ತಿ ದೊರೆತಿದೆ. ಕಾವ್ಯಮೇಳ 1984 ( ಸಂ.ಹಾಮಾನಾ), ದಶವಾರ್ಷಿಕ ಕವಿತೆಗಳು ( ಸಂ. ಗೋ.ಕೃ.ಅಡಿಗ) , 1974-84 : ರತ್ನ ಸಂಪುಟ 1985( ಮೈಸೂರು ವಿಶ್ವವಿದ್ಯಾಲಯ), ಗಾಂಧೀ ಗಾಂಧೀ ( ಚಂಪಾ),ಅಕಾಡೆಮಿಯ ಕಾವ್ಯ ಸಂಚಯಗಳಲ್ಲಿ ದಾಖಲಾತಿ, ಬಂಡಾದಯ ಕಾವ್ಯ: 1990 ( ಸಂ. ಬರಗೂರು ರಾಮಚಂದ್ರಪ್ಪ ) , ರತ್ನ ಸಂಒಉಟ ಕಾವ್ಯ ( ಮೈಸೂರು ವಿಶ್ವವಿದ್ಯಾಲಯ ) ಇನ್ನೂ ಮುಂತಾದ ಕೃತಿಗಳಲ್ಲಿ ಇವರ ಕವನಗಳು ಪ್ರಕಟವಾಗಿವೆ. ರಾಜ್ಯದ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಇವರ ಕವನಗಳು ಪ್ರಕಟವಾಗಿವೆ. ಇವರ ಕವನಗಳನ್ನು ಬೆಂಗಳೂರು, ಧಾರವಾಡ, ಭದ್ರಾವತಿ, ಗುಲ್ಬರ್ಗಾ ಆಕಾಶವಾಣಿಗಳು ಮತ್ತು ಬೆಂಗಳೂರು ದೂರದರ್ಶನ ದಲ್ಲಿ ಪ್ರಸಾರವಾಗಿವೆ. ಬೆಳಗಾವಿ 52ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಮೈಸೂರು ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಬೆಂಗಳೂರು ಬಂಡಾಯ ಸಾಹಿತ್ಯ ಸಮ್ಮೇಳನ, ಕೋಲಾರ, ವಿಜಾಪೂರ ಬಂಡಾಯ ಸಾಹಿತ್ಯ ಸಮ್ಮೇಳನ, ಮೈಸೂರು ದಸರಾ ಕವಿಗೋಷ್ಠಿ, ಹಂಪಿ ಉತ್ಸವ ಹಾಗೂ ಇತರೇ ಕವಿಗೋಷ್ಠಿ ಮತ್ತು 69ನೇ ತುಮಕೂರು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. 62ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕೊಪ್ಪಳ ಗೌರವ ಕಾರ್ಯದರ್ಶಿ, ಸದರಿ ಸಮ್ಮೇಳನದಲ್ಲಿ ನೆನಪಿನ ಸಂಚಿಕೆಯಾದ ತಿರುಳ್ಗನ್ನಡದ ಸಂಪಾದಕ.ಗೋಕಾಕ ಚಳುವಳಿಯಲ್ಲಿ ಸ್ಥಳೀಯ ಕನ್ನಡ ಕ್ರೀಯಾಸಮಿತಿ ಖಜಾಂಚಿಯಾಗಿ ಸೇವೆ. 1986ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿಯ ಅನುದಾನದಿಂದ ಆಂಧ್ರಕ್ಕೆ ಸಾಹಿತ್ಯ ಪ್ರವಾಸ ಮತ್ತು ಅಲ್ಲಿ ಸಾಹಿತ್ಯ ಅಧ್ಯಯನ. ಕನ್ನಡ ಪ್ರಾಧಿಕಾರದ ಜಿಲ್ಲಾಸದಸ್ಯರಾಗಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. 2002ರ ಸಾಲಿನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೊಪ್ಪಳದ ಏಕೈಕ ಸಾಹಿತಿಗಳು. ಕಲ್ಬುರ್ಗಿ ಶ್ರೀ ಶರಣಬಸವೇಶ್ವರ ಸಂಸ್ಥಾನದಿಂದ , ತಳಮಳ ವಾರಪತ್ರಿಕೆಯ ಸಂಸ್ಥಾಪಕ ಸಂಪಾದಕರು. |
|
ದಿ.ಗವಿಸಿದ್ಧ ಎನ್.ಬಳ್ಳಾರಿ Gavisiddha N.Bellary |