|
CONTACT US: kannadanet.com Karishma Digital studio jawahar road, Koppal-583 231 ಕರಿಷ್ಮಾ ಡಿಜಿಟಲ್ಸ್, ಜವಾಹರ ರಸ್ತೆ, ದುರ್ಗಮ್ಮ ಕಟ್ಟೆ ಹತ್ತಿರ ,ಕೊಪ್ಪಳ Phone: 9880257488 E-mail: kannadanet@gmail.com,sirajbisaralli@in.com |
|
ಮುಖಪುಟ ಸಾಹಿತಿಗಳು ಪ್ರತಿಸ್ಪಂದನೆ ನಮ್ಮನ್ನು ಸಂಪರ್ಕಿಸಿ |
|
Kannadanet.com KOPPAL DIST COMPLETE INFORMATION AND NEWS |
|
ಕನ್ನಡನೆಟ್.ಕಾಂ |
|
ಅಲ್ಲಮಪ್ರಭು ಬೆಟ್ಟದೂರು ಸಾಹಿತಿ,ಹೋರಾಟಗಾರರು |
|
ಕೊಪ್ಪಳ ಮತ್ತ ಹೋರಾಟಗಳು ಎಂದರೆ ಅಲ್ಲಮಪ್ರಭು ಬೆಟ್ಟದೂರು ಎನ್ನುವಷ್ಟರಮಟ್ಟಿಗೆ ಕೊಪ್ಪಳದ ಪ್ರತಿಯೊಂದು ಹೋರಾಟಗಳಲ್ಲಿಯೂ ಮುಂಚೂಣಿಯಲ್ಲಿದ್ದು ಹೋರಾಟವನ್ನು ಮಾಡುತ್ತಾ ಬಂದವರು ಅಲ್ಲಮಪ್ರಭು ಬೆಟ್ಟದೂರು.ಬಂಡಾಯ ಸಾಹಿತ್ಯ,ಸಂಘಟನೆಯಲ್ಲಿ ಯಾವಾಗಲೂ ಮುಂದು . ಜನನ : 30-7-1951 ವಿದ್ಯಾಭ್ಯಾಸ : ಎಂ.ಎ.(ಕನ್ನಡ) ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ (1974) ವೃತ್ತಿ : ಪ್ರಾಂಶುಪಾಲರು ಶ್ರೀ ಗವಿಸಿದ್ಧೇಶ್ವರ ಕಾಲೇಜ್,ಕೊಪ್ಪಳ ಕಾವ್ಯ ಕೃತಿಗಳು : ಇದು ನನ್ನ ಭಾರತ (1977), ಕುದರಿಮೋತಿ ಮತ್ತು ನೀಲಗಿರಿ (1989), ಕೆಡಹಬಲ್ಲರು ಅವರು ಕಟ್ಟಬಲ್ಲೆವು ನಾವು ( 2001) ಪ್ರಚಲಿತ ಅಂಕಣ ಕೃತಿ : ವರ್ತಮಾನ (2007) ಸಂಪಾದನಾ ಕೃತಿಗಳು : ತಿರುಳ್ಗನ್ನಡ ( ಅಖಿಲ ಭಾರತ 62ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವಿಚಂಚಿಕೆ) , 1991ರ ಕಾವ್ಯ ( ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ), ಅಂಬಿಗರ ಚೌಡಯ್ಯ ( ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ),ವಿಮೋಚನೆ ( ಹೈದ್ರಾಬಾದ ಕರ್ನಾಟಕ ಸ್ವಾತಂತ್ರ್ಯ ಹೋರಾಟದ ಕೊಪ್ಪಳ ಜಿಲ್ಲೆಯ ಕಥನ ), ಬೆಳಕು ಬಂತು ಬಯಲಿಗೆ ( ಶ್ರೀ ಸಿದ್ದಲಿಂಗೇಶ್ವರ ಬುಕ್ ಡೀಪೋದ ಬೆಳ್ಳಿ ಹಬ್ಬದಲ್ಲಿ ತಂದ ಹೈ.ಕ ಪ್ರಾತಿನಿಧಿಕ ಕವನ ಸಂಕಲನ) , ಕೊಪ್ಪಳ ಜಿಲ್ಲಾ ದರ್ಶನ ( ಗು.ವಿ.ಗು. ಬೆಳ್ಳಿಮಾಲಿಕೆಯಲ್ಲಿ ), ಬಿ.ಎ.ಪ್ರಥಮ ಐಶ್ಛಿಕಕ್ಕೆ ಪಠ್ಯವಾಗಿದ್ದ ಕಾವ್ಯಸುಮ , ಬಿ.ಎಸ್ಸಿ. ಪ್ರಥಮಕ್ಕೆ ಪಠ್ಯವಾಗಿರುವ ನಮ್ಮ ಬೆಳಕು. ಅಂಕಣ ಬರಹ : ಕೊಪ್ಪಳದಿಂದ ಪ್ರಕಟವಾಗುವ ತಳಮಳ ವಾರಪತ್ರಿಕೆಗೆ ಪ್ರಚಲಿತ ಹೆಸರಿನ ಅಂಕಣಕ್ಕೆ ಅಂಕಣಕಾರ ಸಂಘಟನೆ : ಎರಡು ಸಲ ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕನಾಗಿ ಕಾರ್ಯ. ತುಂಗಭದ್ರ ಉಳಿಸಿ ಹೋರಾಟ ಸಮಿತಿ ಸದಸ್ಯ, ಕೋಮು ಸೌಹಾರ್ಧ ಸಮಿತಿ ಸದಸ್ಯ. ಸದಸ್ಯತ್ವ : ಚಂಪಾ ಅಧ್ಯಕ್ಷರಾಗಿದ್ದಾಗ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯನಾಗಿ ಕಾರ್ಯ . ಡಾ.ಗುರುಲಿಂಗ ಕಾಪಸೆಯವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಸದಸ್ಯನಾಗಿ ಕಾರ್ಯ .ಕರ್ನಾಟಕ ನಾಟಕ ಅಕಾಡೆಮಿಯ ಜಿಲ್ಲಾ ಸಂಚಾಲಕ. ಹೋರಾಟ : ಗೋಕಾಕ ಸಮಿತಿ ಹೋರಾಟ, ಕುದರಿಮೋತಿ ಹೋರಾಟ, ಕೊಪ್ಪಳ ಜಿಲ್ಲಾ ಹೋರಾಟಗಳನ್ನು ಕಾರ್ಯದರ್ಶಿಯಾಗಿ ಸಂಘಟಿಸಿದ್ದು. ಬಹುಮಾನ : ಕುದರಿಮೋತಿ ಮತ್ತು ನೀಲಗಿರಿ ಕೃತಿಗೆ ಗುಲ್ಬರ್ಗಾ ವಿ.ವಿ.ಯಿಂದ 2000 ರೂ. ಸಹಾಯಧನ. ಕೆಡಹಬಲ್ಲರು ಅವರು ಕಟ್ಟಬಲ್ಲೆವು ನಾವು ಕೃತಿಗೆ ಅಂದಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಶರಣಗೌಡರು ತಮ್ಮ ತಾಯಿಯ ಸ್ಮರಣೆಗೆ ನೀಡಿದ ಬಹುಮಾನ 1000 ರೂ. ಹವ್ಯಾಸಗಳು : ಪ್ರವಾಸ , ಫೋಟೋಗ್ರಾಫಿ ಪ್ರಶಸ್ತಿ : ಕನ್ನಡ ಕ್ರಿಯಾ ಸಮಿತಿ ಶಕ್ತಿನಗರದಿಂದ ರಾಜ್ಯೋತ್ಸವ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಸಾಹಿತ್ಯ ಪ್ರಶಸ್ತಿ /ಕಾವ್ಯ ಪ್ರಶಸ್ತಿ.ವಿಶ್ವೇಶ್ವರಯ್ಯ ಪ್ರಶಸ್ತಿ, ಸುವರ್ಣ ಕರ್ನಾಟಕ ಗೌರವ ಪುರಸ್ಕಾರ ( ( ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ),ಕಲಾವಿಕಾಸ ಪರಿಷತ್ತಿನ ಸುವರ್ಣ ಕರ್ನಾಟ ರಾಜ್ಯ ಪ್ರಶಸ್ತಿ, ವರಕವಿ ಡಾ. ದ.ರಾ.ಬೇಂದ್ರೆ ಕಾವ್ಯ ಪುರಸ್ಕಾರ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಚೆನ್ನೈದಿಂದ ಕನ್ನಡ ಸಾಹಿತ್ಯ ಸೇವೆಗೆ ಸನ್ಮಾನ , ಪದಕ. |
|
ಅಲ್ಲಮಪ್ರಭು ಬೆಟ್ಟದೂರು Allamaprabhu Bettadhuru |
|
ಅಲ್ಲಮಪ್ರಭು ಬೆಟ್ಟದೂರು |

