CONTACT US:      kannadanet.com Karishma Digital studio jawahar road, Koppal-583 231

ಕರಿಷ್ಮಾ ಡಿಜಿಟಲ್ಸ್, ಜವಾಹರ ರಸ್ತೆ, ದುರ್ಗಮ್ಮ ಕಟ್ಟೆ ಹತ್ತಿರ ,ಕೊಪ್ಪಳ Phone: 9880257488 E-mail:   kannadanet@gmail.com,sirajbisaralli@in.com

ಮುಖಪುಟ    ಸಾಹಿತಿಗಳು   ಪ್ರತಿಸ್ಪಂದನೆ       ನಮ್ಮನ್ನು ಸಂಪರ್ಕಿಸಿ

    KOPPAL DIST COMPLETE INFORMATION AND NEWS

ಕನ್ನಡನೆಟ್.ಕಾಂ

Text Box: ಉತ್ತರ ಕರ್ನಾಟಕ ಮತ್ತು ಕೊಪ್ಪಳ ಜಿಲ್ಲೆಯ ಪ್ರಪ್ರಥಮ ಕನ್ನಡ  ಇ-ಪತ್ರಿಕೆ

Www.kannadanet.com

ಅಕ್ಬರ್ ಕಾಲಿಮಿರ್ಚಿ

ಪತ್ರಕರ್ತ,ಕವಿ,ಕತೆಗಾರ

 

         ಕೊಪ್ಪಳದ ಯುವಸಂಘಟನೆಗಳನ್ನು ಕಟ್ಟುವಲ್ಲಿ ರೂಪಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಿರುವವರು ಅಕ್ಬರ್ ಕಾಲಿಮಿರ್ಚಿ . ಯುವಕರಿಗೆ ದಾರಿದೀಪವಾಗಿ ಅವರ ಭವಿಷ್ಯ ರೂಪಿಸಲು ಅವರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಯಾವತ್ತೂ ಯುವ ಜನಾಂಗಕ್ಕೆ ಸ್ಪೂರ್ತಿಯ ಕೆಲಸ ಮಾಡುತ್ತಿರುವ ಅಕ್ಬರ್ ಕಾಲಿಮಿರ್ಚಿ ಈಗ ಭಾಗ್ಯನಗರದ ನಿವಾಸಿ.

ಜನನ : 3-9-1965 ತಂದೆ : ಚಂದುಸಾಬ ಕಾಲಿಮಿರ್ಚಿ ತಾಯಿ : ಮರಿಯಂಬಿ  ಕಾಲಿಮಿರ್ಚಿ

ಜನ್ಮಸ್ಥಳ : ಮಂಗಳೂರು ತಾ: ಯಲಬುರ್ಗಾ  ಶಿಕ್ಷಣ :   ಐಟಿಐ ಮಶಿನಿಸ್ಟ್, ಡಿಫಾರ್ಮಾ.

ಸ್ಥಾಪಿಸಿದ ಸಂಘಟನೆಗಳು : ಕನ್ನಡ ಕಲಾ ಹವ್ಯಾಸಿ ಸಂಘ(ರಿ), ಕನ್ನಡ ಸಾಹಿತ್ಯ ವೇದಿಕೆ, ಕರ್ನಾಟಕ ಸಾಂಸ್ಕೃತಿಕ ಕೇಂದ್ರ, ಕನ್ನಡ ಮೈತ್ರಿ ಪ್ರಕಾಶನ, ಕರ್ನಾಟಕ ಪ್ರಗತಿ ರಂಗ, ಕಾಲಿಮಿರ್ಚಿ ಸಾಕ್ಷರತಾ ಕೇಂದ್ರ, ಗ್ರಾಮೀಣ ನಿರ್ಮಲ ಕ್ಷೇಮಾಭಿವೃದ್ದಿ ಸೇವಾ ಸಂಸ್ಥೆ (ರಿ).

 ಉತ್ತಮ ಬರಹಗಾರರಾಗಿ ಗುರುತಿಸಿಕೊಂಡಿರುವ ಕಾಲಿಮಿರ್ಚಿಯವರ ಕಥೆ, ಕವನ, ಲೇಖನ , ಹನಿಗವನ, ಮಕ್ಕಳ ಕವನಗಳು ರಾಜ್ಯ ಮತ್ತು ಜಿಲ್ಲೆಯ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಪತ್ರಕರ್ತ ಬಿ.ವಿ.ವೈಕುಂಠರಾಜು ಅವರ ಸಂಪಾದಕತ್ವದ ವಾರಪತ್ರಿಕೆ ವರದಿಗಾರನಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಕಟಿತ ಕೃತಿಗಳು :  ಹಾಡ ಕೆಡಿಸಬ್ಯಾಡ್ರಿ 1988(ರಾಜ್ಯಮಟ್ಟದ ಕವನ ಸಂಕಲನ), ಕಾಲಿಮಿರ್ಚಿ ಪ್ರಶ್ನೆಗಳು ( ಪ್ರಶ್ನೆ ಸಂಕಲನ) 1990, ಆಶಯ ( ಕವನ ಸಂಕಲನ) 1993, ಆಕಾಶ ಮಲ್ಲಿಗೆ ( ಕೆ.ವಿರುಪಾಕ್ಷಗೌಡರ ಸಮಗ್ರ ಸಂಕಲನ) ಸಂಪಾದಕ 2000, ಯುವಸಿರಿ(ಸ್ನೇಹ ಸಂಕಲನ) 1995, ಡಿಂಡಿಮ ( ಸರಕಾರಿ ಪ್ರೌಢಶಾಲೆ ರಜತ ಮಹೋತ್ಸವ) 1992, ಕಪ್ಪುಮೋಡದ ಮಿಂಚು ( ಕವನ ಸಂಕಲನ) ಅಪ್ರಕಟಿತ.

ಪ್ರಶಸ್ತಿಗಳು ,ಸನ್ಮಾನಗಳು : 1992-93ನೇ ಸಾಲಿನ ಅತ್ಯುತ್ವ ಜಿಲ್ಲಾ ಯುವಪ್ರಶಸ್ತಿ  ಜಿಲ್ಲಾ   ಆಡಳಿತ ಮತ್ತು ನೆಹರು ಯುವಕೇಂದ್ರ ರಾಯಚೂರ   ಇವರಿಂದ . 1993-94ನೇ ಸಾಲಿನ ರಾಜ್ಯ ಯುವ ಪ್ರಶಸ್ತಿ ಕರ್ನಾಟಕ ಸರಕಾರದಿಂದ, 1998-99ನೇ ಸಾಲಿನ ಯುವನೇತಾರ ಬಿರುದು ವಿಶ್ವಕ್ರಾಂತಿ ಯುವಕ ಸಂಘ(ರಿ) ಮಂಗಳೂರ  ಇವರಿಂದ, 2002-03ನೇ ಸಾಲಿನ ಯುವನಾಯಕ ಬಿರುದು ಜಿಲ್ಲಾ ಯುವ ಒಕ್ಕೂಟ ಕೊಪ್ಪಳ   ಇವರಿಂದ.

ಪ್ರಸ್ತುತ ವಿಳಾಸ :       ಅಕ್ಬರ್ ಸಿ.ಕಾಲಿಮಿರ್ಚಿ

                                ಮಂಜುನಾಥ ಬಡಾವಣೆ, ಧನ್ವಂತರಿ ಕಾಲೋನಿ,

                  ಭಾಗ್ಯನಗರ-583 231.ತಾ:ಜಿ:ಕೊಪ್ಪಳ

                                ಮೊ : 973132782, 944996560

ಅಕ್ಬರ್ ಕಾಲಿಮಿರ್ಚಿ (ರಾಜ್ಯ ಯುವಪ್ರಶಸ್ತಿ ವಿಜೇತರು)   

 Akbar Kalimirchi