KOPPAL DIST COMPLETE INFORMATION AND NEWS

* ಸುದ್ದಿಗಳು/ಲೇಖನಗಳು

Text Box: * ವಿಶೇಷ ಸುದ್ದಿಗಳು
* ಗಂಗಾವತಿ
* ಯಲಬುರ್ಗಾ
* ಕುಷ್ಟಗಿ
Text Box: ಎಂಪಿ, ಎಂಎಲ್ ಎ  MP, MLA
ಜಿಲ್ಲಾ ಪಂಚಾಯತ ZP
ತಾಲೂಕ ಪಂಚಾಯತ್ TP
ನಗರಸಭೆ/ಪುರಸಭೆಗಳು Muncipalty
Text Box: ಸರಕಾರಿ ಕಚೇರಿಗಳು ಅಧಿಕಾರಿಗಳು
Text Box: ಕಿನ್ನಾಳ    ಗೊಂಬೆ ಕಲೆಗಾಗಿ ವಿಶ್ವಪ್ರಸಿದ್ದಿ ಪಡೆದ ಊರು

Kinnal  World Famous Village for Art

 

Text Box:  	ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲಾ ಸ್ಥಳದಿಂದ ಕೇವಲ 11 ಕಿಮಿ ದೂರದಲ್ಲಿರುವ ಕಿನ್ನಾಳು ಒಂದು ಪುಟ್ಟಗ್ರಾಮ. ಆದರೆ ಎಲ್ಲ ಗ್ರಾಮಗಳಂತೆ ಇದಲ್ಲ.  ಕಿನ್ನಾಳ ವಿಶ್ವದ ತುಂಬೆಲ್ಲಾ ತನ್ನ  ಚಿತ್ರಗಾರಿಕೆ ಮತ್ತು ವಿಶಿಷ್ಟ ಗೊಂಬೆ ಕಲೆಯಿಂದ  ಸುಪ್ರಸಿದ್ಧಿಯನ್ನು ಪಡೆದುಕೊಡಿದೆ. ಸ್ಕಾಟ್ಲೆಂಡ್ ಮತ್ತು ಆಸ್ಟ್ರೇಲಿಯಾಗಳಿಂದ ಬಂದು ಈ ಕಲೆಯನ್ನು ಅಭ್ಯಾಸ ಮಾಡಿ ತಮ್ಮ ನಾಡಿನಲ್ಲೂ ಈ ಕಲೆಯನ್ನು ವಿಸ್ತರಿಸಬೇಕೆಂಬೆಂಬು ಮಹಾದಾಸೆ ಹೊತ್ತು ಬರುವ ಪ್ರಜೆಗಳಿದ್ದಾರೆ ಎಂದರೆ ಈ ಕಲೆಯ ಮಹತ್ವ ಅರಿವಾಗುತ್ತದೆ.  ಕರಕುಶಲ ಕಲೆಗೆ ರಾಷ್ಟ್ರ ಅಂತರಾಷ್ಟ್ರೀಯ ಖ್ಯಾತಿ ಪಡೆದ   ಈ ಕಿನ್ನಾಳಿನ ಕಲಾಮಾದರಿಯಾಗಲು ದೇಶ ವಿದೇಶಗಳಲ್ಲಿ ಪುರಸ್ಕಾರ ಪಡೆದಿವೆ.
	ಕಿನ್ನಾಳಿನ  ಈ ಕಲೆಗೆ ವಿಜಯನಗರದ ಅರಸರು ಪೋಷಕರಾಗಿದ್ದರೆಂದು ಚರಿತ್ರೆಯಿಂದ ತಿಳಿದು ಬರುತ್ತದೆ. ವಿಜಯನಗರದ ಪತನದ ನಂತರ ಚಿತ್ರಗಾರ ಕುಟುಂಬದವರು ನಾಡಿನ ಅನೇಕ ಕುಟುಂಬಗಲು ವಲಸೆ ಬಂದವು. ಇಂದಿಗೂ  ತಮ್ಮ   ಈ ಸಾಂಪ್ರದಾಯಿಕ ಕಲೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ   ಇಂಥ ಕುಟುಂಬಗಳು  ನಮಗೆ ದೊರೆಯುತ್ತಿರುವುದು ಕಿನ್ನಾಳ  ಗ್ರಾಮದಲ್ಲಿ ಮಾತ್ರ. ಬೇರೆ ಬೇರೆ ಗ್ರಾಮಗಳಲ್ಲಿ ಈ ಜನಾಂಗ ನೆಲೆಸಿದ್ದರೂ ಬದಲಾದ ಬದುಕಿಗೆ ಅನುಗುಣವಾಗಿ ವೃತ್ತಿಯನ್ನು ಕಂಡುಕೊಂಡು ಈ ಕಲೆಗೆ ಅಂಥ ಪ್ರೋತ್ಸಾಹವನ್ನು ಅವರು ಕೊಟ್ಟಿದ್ದು ಮಾತ್ರ ಕಾಣುವುದಿಲ್ಲ.
	ಆದರೆ ಇಂದಿಗೂ ಆಧುನಿಕ  ಜಗತ್ತಿನ ಪೈಪೋಟಿಯ ಮಧ್ಯೆಯೆ ಈಕಲೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವುದು ಕಿನ್ನಾಳಿನ ಚಿತ್ರಗಾರ ಕುಟುಂಬಗಳ ಹೆಗ್ಗಳಿಕೆ ಎಂದೇ ಹೇಳಬೇಕು.	
	ಕಿನ್ನಾಳದಲ್ಲಿ ಇಂದು ಒಟ್ಟು 54 ಚಿತ್ರಗಾರ ಕುಟುಂಬಗಳಿವೆ. ಇದರಲ್ಲಿ 28 ಕುಟುಂಬದವರು ಈ ಸಾಂಪ್ರದಾಯಿಕ ಕಲೆಯನ್ನು ಪೋಷಿಸಿಕೊಂಡು  ಬರುತ್ತಿದ್ದಾರೆ. ಹಂಪೆಯ ವಿರುಪಾಕ್ಷ ಮಂದಿರದಲ್ಲಿ ಚಿತ್ರಿಸಿರುವ ಛತ್ತಿನ ಚಿತ್ರಕಲೆ ಕಿನ್ನಾಳ ಚಿತ್ರಗಾರರ ಚಿತ್ರಕಲೆ ಎಂದು ಸಂಶೋಧಕರು ಗುರುತಿಸಿದ್ದಾರೆ.
Text Box: 	ಚಿತ್ರಗಾರರ ಕೈಯಲ್ಲಿ  ಕುಂಚದಲ್ಲಿ ಅರಳುವ ವಿವಿಧ ಕಲಾಕೃತಿಗಳು :
ಕಟ್ಟಿಗೆಯಿಂದ ಪಲ್ಲಕ್ಕಿ , ಛತ್ರಿ, ಚಾಮರ, ತೇರು ,ತೇರಿಗೆ ಕಟ್ಟುವ ಗೊಂಬೆಗಲು , ದ್ವಾರಪಾಲಕ ಗೊಂಬೆಗಳು, ಉತ್ಸವ ಮೂರ್ತಿಗಳು, ಗೌರಿ,ಗಣೇಶ,ಕಟ್ಟಿಗೆ ತೊಟ್ಟಿಲು ರಥಗಳು, ಕಿನ್ನಾಳದ ಗೌರಿ ಎಂದೇ ಪ್ರಸಿದ್ಧಿ ಪಡೆದಿರುವ ಕಾಮನ ಹಬ್ಬದ ಕಾಮರತಿ ವಿಗ್ರಹ, ದಶಾವತಾರ ಗೊಂಬೆಗಳು , ನವಗ್ರಹ, ಅಷ್ಟದಿಕ್ಪಾಲಕರ ಗೊಂಬೆಗಳು, ಗ್ರಾಮದೇವತೆಗಳು. ಕೀಲದ ಗೌರಿ, ಶಿವ ಪಾರ್ವತಿ ಮೂರ್ತಿಗಳು, ಹಣ್ಣು ತರಕಾರಿಗಳು, ಕಾಡು ಪ್ರಾಣಿಗಳು, ಸಾಕು ಪ್ರಾಣಿಗಳು ವಿಶಿಷ್ಟತೆಯನ್ನು ಪಡೆದುಕೊಂಡಿದೆ.
	ಕಿನ್ನಾಳ ಬಣ್ಣಗಾರಿಕೆಯ ವಿಶೇಷತೆ ಮತ್ತು ಕೀರ್ತಿ ;
 ಕಿನ್ನಾಳ  ಚಿತ್ರಗಾರರ ಹಸ್ತದಲ್ಲಿ ಮಿಶ್ರಣವಾಗಿ ಮೂಡಿ ಬರುವ ಬಣ್ಣ, ಕಿನ್ನಾಳ ಬಣ್ಣ  ಎಂದೇ ಪ್ರಸಿದ್ದಿ  ವಿಜಯನಗರದ ಕಾಲದಲ್ಲಿ ಲೇಪಾಕ್ಷಿ ಹಿಂದೂಪುರ, ಹಂಪಿಯ ವಿರುಪಾಕ್ಷ ದೇವಸ್ಥಾನದಲ್ಲಿ ರಚಿಸಿದ ಚಿತ್ರಗಳ ಶೈಲಿಯನ್ನು ಆಧರಿಸಿದ ಬಣ್ಣಗಲಾದ ಕೆಂಪು, ಹಳದಿ, ನೀಲಿ, ಕಪ್ಪು, ಬಿಳಿ ಬಣ್ಣಗಲನ್ನು ಪ್ರಕೃತಿಯಲ್ಲಿ  ದೊರೆಯುವ ಕಲ್ಲುಗಳಿಂದ   ಉಪಯೊಗಿಸಿ ಬಣ್ಣಗಳನ್ನು ತಯಾರಿಸುತ್ತಿದ್ದರು. ವಿದ್ವಾಂಸರ ಪ್ರಕಾರ ಕ್ರಿ.ಶ. 13ನೇಯ ಶತಮಾನದಲ್ಲಿ ಆಮದಾದ ಪರ್ಶಿಯನ್ ಬಣ್ಣವನ್ನು ಇವರ ಹಿರಿಯರು ಉಪಯೋಗಿಸುತ್ತಿದ್ದರು  ಎಂದು ತಿಳಿದು ಬರುತ್ತದೆ. ಇಂದಿನ ಚಿತ್ರಗಾರ ಕುಟುಂಬದವರು ಸಾಂಪ್ರಾದಾಯಿಕ ಬಣ್ಣಗಳನ್ನು ಬಳಸಿ ತಮ್ಮ ಚಿತ್ರಗಾರಿಕೆ ಹೊಸ ಹೊಸ ರೂಪಗಳನ್ನು ವಿನ್ಯಾಸಗಳನ್ನು ತಮ್ಮ ಚಿತ್ರಗಳಲ್ಲಿ ಅಳವಡಿಸಿಕೊಂಡಿದ್ದಾರೆ. ಆದರೆ ಸಾಂಪ್ರಾದಾಯಿಕ ಸೊಬಗು ಮರೆಯಾಗಿ, ವ್ಯಾಪಾರಿ ಮನೋಭಾವ ಪ್ರಭಾವ ಪಡೆಯುತ್ತಿರುವುದು ಎದ್ದುಕಾಣುವಂತಿದೆ. 
	ಲೋಹದ ಬಣ್ಣ ತಯಾರಿಕೆ ( ಲಜಾವರ) :  
ಇದನ್ನು ತವರದ ಲೋಹದಿಂದ ತಯಾರಿಸುವರು. ಚೆನ್ನಾಗಿ ಕುಟ್ಟಿ , ಹದಕ್ಕೆ ಬಂದ ಮೇಲೆ ಅಂಚಿನ ದ್ರಾವಣದೊಂದಿಗೆ  ಬೆರೆಸಿ, ಮೂರ್ತಿಗಳಿಗೆ ಚಿತ್ರಗಳಿಗೆ, ಸುಳುವುಗಳಿಗೆ, ಆಭರಣಗಳನ್ನು  ಬಳಸುವ ಭಾಗಗಳಿಗೆ ಹಾಕುವರು. ಬಣ್ಣವು   ಒಣಗಿದ ಮೇಲೆ, ಉಪಯೋಗಿಸದ ಬಣ್ಣದ ಮೇಲೆ ಹೊಳೆಯಲ್ಲಿ ಸಿಗುವ ಕಾಜಿನಂತೆ ಕಾಣುವ  ಸಣ್ಣ ಗುಂಡಿನಿಂದ  ಉಜ್ಜಿದಾಗ ಬೆಳ್ಳಿಯ ರೂಪಕ್ಕೆ ಬರುವುದು. ಬಂಗಾರದ ರೂಪತರಲು ಸ್ಪಿರಿಟ್ ನಲ್ಲಿ ಬಂಗಾರದ ಅರಗು ಚಂದ್ರಾಸ, ಪತ್ರ ಅರಗನ್ನು ಮಿಶ್ರ ಮಾಡಿ ಅದಕ್ಕೆ ಕೇಸರಿ ಬಣ್ಣ ಮಿಶ್ರಣ ಮಾಡಿ ಬಾಟಲಿಯಲ್ಲಿ ಇಡುವುದು. ಇದನ್ನು ಬಿಸಿಲಿಗೆ ಇಟ್ಟಾಗ ತಾಪಕ್ಕೆ ಅದರೊಳಗಿನ ಮಿಶ್ರಣ ಕರಗಿ ಬಂಗಾರದ ರೂಪ ತಾಳುವುದು. ಇದರ ಮೇಲೆ ಬೇಕಾದ ಚಿತ್ರಗಳು ಮೂಡಿ ಬರುವಂತೆ ಜಿನುಗಾದ  ಇಣಚಿಬಾಲದ ಕುಂಚ ಬಳಸಿ ನಾಜೂಕಾದ ಗೆರೆಯನ್ನು ಬರೆದು, ಮೇಲೆ ವಾರ್ನಿಷನ್ನು  ಹಚ್ಚಿ ಒಣಗಿಸುವುದರಿಂದ ಚಿತ್ರಗಳು ಮರದ  ಹಲಗೆಯ ಮೇಲ್ಮೈ  ಮೇಲೆ ಗಟ್ಟಿಯಾಗಿ ಬಹುಕಾಲದವರೆಗೆ ಉಳಿಯುತ್ತದೆ.
	ಕಟ್ಟಿಗೆಯಲ್ಲಿ ರೂಪಗೊಳ್ಳುವ ಕಲೆ : ಪೊಲಕಿ ಎಂಬ ಮರದ ಕಟ್ಟಿಗೆಯನ್ನು ಉಪಯೋಗಿಸಿ ಮೂರ್ತಿಗಳನ್ನು ಮಾಡುತ್ತಾರೆ. ಪ್ರಥಮ ಹಂತದಲ್ಲಿ ಕಟ್ಟಿಗೆಯ ಮೇಲ್ಮೈಯನ್ನು ನುಣುಪುಗೊಳಿಸಿ ಮರದ ಮೇಲ್ಮೈ ರಚನೆಗೆ ಯೋಗ್ಯವಾದಂತಹ  ಬಿಳಿ ಬಣ್ಣ ಹಾಕುವುದು, ಬಿಳಿದಾದ ಬಣ್ಣದಿಂದ ನುಣುಪುಗೊಳಿಸಿದ ನಂತರ ಮನೆಯಲ್ಲಿ ಬಣ್ಣ  ತಯಾರಿಸುವರು.ಆಯಾ ಬಣ್ಣಗಳಿಗೆ ಪ್ರಕೃತಿಯಲ್ಲಿ ದೊರೆಯುವ ಮರಗಳ ಅಂಟಿನಿಂದ ದ್ರಾವಣ ಮಾಡಿ , ಬಣ್ಣಕ್ಕೆ ಬೆರೆಸಿ ಬಣ್ಣಗಳನ್ನು ತುಂಬುವದು. ಬಣ್ಣ ಕಾರ್ಯ  ಮುಗಿದ ಮೇಲೆ ವಾರ್ನಿಷನ್ನು ಹಚ್ಚುವರು. ಮೊದಲು ರಾಳಗಳಿಂದ ವಾರ್ನಿಷನ್ನು ಸಿದ್ದಪಡಿಸುತ್ತಿದ್ದರು. ಈಗ ಮಾರುಕಟ್ಟೆಯಲ್ಲಿ ದೊರೆಯುವ  ಉತ್ಕೃಷ್ಟ ವಾರ್ನಿಷನ್ನು ಬಳಸುವರು.
ಚಿತ್ರಕಲೆಯ ವೈಶಿಷ್ಟ : 
	ಕಿನ್ನಾಳದ ಚಿತ್ರಶೈಲಿ ಸರಳ ಮತ್ತು  ಸುಂದರವಾದದು. ಬಣ್ಣಗಲು ಹಾಗೂ ಚಿತ್ರಗಳು ಆಕರ್ಷಕವಾಗಿರುತ್ತವೆ. ಇವರು ಮೊದಲಿನಿಂದಲೂ ಪುರಾಣಗಲಿಗೆ ಸಂಬಂಧಪಟ್ಟ ಚಿತ್ರಗಳನ್ನೇ ಚಿತ್ರಿಸುತ್ತಾ ಬಂದಿರುವರು. ವೈಷ್ಣವ,ಶೈವ, ಧರ್ಮಗಳಿಗೆ ಸಂಬಂಧಪಟ್ಟ ದೇವ ದೇವತೆಯರ , ಮಹಾಭಾರತ, ರಾಮಾಯಣದ ಚಿತ್ರಗಲು, ಅಷ್ಟದಿಕ್ಪಾಲಕರು, ದೇವಿ ಪುರಾಣದಿಂದ ಆಯ್ದ ವಿಷಯಗಳು ಚಿತ್ರಗಾರರ ವಿನ್ಯಾಸದ ಪ್ರತಿಭೆಯಲ್ಲಿ  ಚಿತ್ರಣಗೊಳ್ಳುತ್ತವೆ.
	 ಕಿನ್ನಾಳ ಕಲೆಯ ಮೂಲ ಪುರುಷ ಸಂಜೀವಪ್ಪ ಎಂಬ ಅಭಿಪ್ರಾಯವಿದೆ. ರೇಣುಕಪ್ಪ, ಪರಶುರಾಮಪ್ಪ, ಯಂಕಪ್ಪ,ರಂಗಪ್ಪ, ಹನುಮಂತಪ್ಪ, ಕೃಷ್ಣಪ್ಪ, ತಂದೆ ಯಂಕಪ್ಪ, ರಾಮಚಂದ್ರಪ್ಪ, ತಂದೆ ಯಂಕಪ್ಪ, ಶೀನಪ್ಪ ,, ರಾಮಚಂದ್ರಪ್ಪ  ಸಾಂಪ್ರಾದಾಯಿಕ ಚಿತ್ರಕಲೆಯನ್ನು ಮುಮದುವರೆಸಿಕೊಂಡು ಬಂದು ತಮ್ಮ ಮಕ್ಕಳಿಗೂ ಈ ಕಲೆಯನ್ನು ಕಲಿಸಿದ್ದಾರೆ. ಸಧ್ಯ  ಈ ಕಲೆಯನ್ನು ಯಂಕೋಬಣ್ಣ, ಲಕ್ಷ್ಮಣ, ಕೃಷ್ಣಮುರ್ತೆಪ್ಪ, ಅಂಜನಪ್ಪ, ಶ್ರೀಧರ ಕಿಶೋರ, ಪ್ರಲ್ಹಾದ, ಶಂಕ್ರಪ್ಪ, ವಾಸುದೇವಪ್ಪ , ದೊತ್ಯಗಂಗಪ್ಪ, ಧರ್ಮಣ್ಣ ಪ್ರಭಾಕರ ಮುಂತಾದವರು  ಈ ಕಲೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದವರು :
 ಕೃಷ್ಣಪ್ಪ ತಂದೆ ಯಂಕಪ್ಪ ಚಿತ್ರಗಾರ , ರಾಮಚಂದ್ರಪ್ಪ ಪರಶುರಾಮಪ್ಪ ಚಿತ್ರಗಾರ, ನಾರಾಯಣಪ್ಪ ತಂದೆ ಶೀನಪ್ಪ ಚಿತ್ರಗಾರ, ಸೋಮಣ್ಣ ತಂದೆ  ವೆಂಕೋಬಪ್ಪ ಚಿತ್ರಗಾರ, ರಾಮಣ್ಣ ಹನುಮಂತಪ್ಪ ಚಿತ್ರಗಾರ,  ಏಕಪ್ಪ ರಾಮಚಂದ್ರಪ್ಪ ಚಿತ್ರಗಾರ, ಅಣ್ಣಪ್ಪ ಏಕಪ್ಪ ಚಿತ್ರಗಾರ  ಇವರು ರಾಷ್ಟ್ರಮಟ್ಟೆದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಆಧುನಿಕತೆಯ ಪೆಟ್ಟು : ಸಾಂಪ್ರಾದಾಯಿಕ ಕಲೆಗಳಿಗೆ ಆಧುನಿಕ ಅವಿಷ್ಕಾರಗಳೇ ಮರಣಾಂತಿಕ ಪೆಟ್ಟು ನೀಡುತ್ತಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ಪ್ಲಾಸ್ಟಿಕ್ ವಸ್ತುಗಳಿಂದ , ಯಂತ್ರಗಳಿಂದ ತಯಾರಿಸುವ ವಸ್ತುಗಳಿಂದ  ಈ ಚಿತ್ರಗಾರರ ಸಾಂಪ್ರದಾಯಿಕ ಕಲೆಗೆ ಪೆಟ್ಟು ಬೀಳುತ್ತಿದೆ. ಈ ಕಲೆ ನಶಿಸದಂತೆ ಸರಕಾರ ಕೆಲವು ಪ್ರೋತ್ಸಾಹಗಳನ್ನು ನೀಡಿದ್ದರೂ ಇನ್ನೂ ಹೆಚ್ಚಿಸುವ ಅಗತ್ಯವಿದೆ. ಸಾಂಪ್ರದಾಯಿಕ ಕಲೆಗಳಲ್ಲಿ ನುರಿತವರಿಂದ ತರಬೇತಿ ಕೊಡಿಸುವುದು ಅವಶ್ಯವಾಗಿದೆ.

ಪೂರಕ ಮಾಹಿತಿ

 ಡಾ.ವಿ.ಬಿ.ರಡ್ಡೇರ

ಪ್ರಾಚಾರ್ಯರು .ಸ..ಪ.ಪೂ,ಕಾಲೇಜ್ ಕಿನ್ನಾಳ

CONTACT US:      kannadanet.com Karishma Digital studio jawahar road, Koppal-583 231

ಕರಿಷ್ಮಾ ಡಿಜಿಟಲ್ಸ್, ಜವಾಹರ ರಸ್ತೆ, ದುರ್ಗಮ್ಮ ಕಟ್ಟೆ ಹತ್ತಿರ ,ಕೊಪ್ಪಳ Phone: 9880257488 E-mail:   kannadanet@gmail.com,sirajbisaralli@in.com

ಮಾಹಿತಿ

ಶ್ರೀ ಗವಿಸಿದ್ದೇಶ್ವರ ಮಠ

ರಾಜಕೀಯ ವ್ಯಕ್ತಿಗಳು

ವೈದ್ಯರು/ಆಸ್ಪತ್ರೆಗಳು

ಗುತ್ತಿಗೆದಾರರು

ನಮ್ಮ ಸಾಧಕರು/Achievers

ಪತ್ರಿಕೆಗಳು/ಪತ್ರಕರ್ತರು

ಸಾಹಿತಿಗಳು

ಕಲಾವಿದರು

ಸಂಘ ಸಂಸ್ಥೆಗಳು

ಸಿನಿಮಾ ಮಂದಿರಗಳು

ವಕೀಲರು

ಶಿಕ್ಷಣ ಸಂಸ್ಥೆಗಳು

ಅಂಗಡಿಗಳು

 ತರಬೇತಿ ಕೇಂದ್ರಗಳು

ಉರ್ದು ಕವಿಗಳು

ಫೋಟೋಸ್ಟುಡಿಯೋಗಳು

ಫ್ಯಾಕ್ಟರಿಗಳು

ಉದ್ಯಮಿಗಳು/ಉದ್ಯಮಗಳು

ಹೋಟೆಲ್/ಲಾಡ್ಜ್ / ಕಲ್ಯಾಣಮಂಟಪ

ಪ್ರಿಂಟಿಂಗ ಪ್ರೆಸ/ಜೇರಾಕ್ಸ್ ಟೈಪಿಂಗ್

 ಎನ್ ಜಿ ಓಗಳು/NGOs

ಸೇವಾ ಸಂಸ್ಥೆಗಳು

 ಪ್ರಮುಖ ದೂರವಾಣಿ ಸಂಖ್ಯೆಗಳು