|
KOPPAL DIST COMPLETE INFORMATION AND NEWS |
|
ಅಗ್ನಿದಿವ್ಯ ಹುಸೇನ್ ಪಾಷಾ |
|
ಕೊಪ್ಪಳ : ಮಧ್ಯರಾತ್ರಿ ಹೊತ್ತು ಆಕೆ ನಿಮ್ಮ ಮನೆ ಮುಂದೆ ನಿಂತು ನಿಮ್ಮ ಹೆಸರಿನಿಂದ ಕರೆಯುತ್ತಾಳೆ, ನೀವು ಇಷ್ಟೋತ್ತಲ್ಲಿ ಯಾರಿರಬಹುದು ಅಂತ ಕುತೂಹಲದಿಂದ ಬಾಗಿಲು ತೆಗೆದು ಆಕೆಯನ್ನು ನೋಡಿದರೆ ... ಖಲ್ಲಾಸ್ ! ರಕ್ತ ಕಾರಿ ಅಲ್ಲಿಯೇ ಸತ್ತು ಹೋಗುತ್ತೀರಿ. ಇದು ಕೊಪ್ಪಳದಲ್ಲಿ ಕಳೆದ ಎಂಟು ದಿನಗಳಿಂದ ಕೂಗವ್ವ ಅಲಿಯಾಸ್ ಕೂಗುಮಾರಿಯ ಹೆಸರಲ್ಲಿ ಭಯಕ್ಕೀಡಾದ ಜನರ ವಿವರಣೆ.ಕೂಗುಮಾರಿಯ ಕೂಗಿಗೆ ನೀವು ಬಲಿಯಾಗಬಾರದೆಂದರೆ ಅದಕ್ಕೊಂದು ಸಿಂಪಲ್ ಸಜೇಷನ್ ಇದೆ. ನೀವು ನಿಮ್ಮ ಮನೆ ಬಾಗಿಲಿಗೆ ನಾಳೆ ಬಾ ಎಂದು ಬರೆಯಬೇಕು ಮತ್ತು ಮನೆಯ ಮುಂದೆ ಪ್ರತಿದಿನ ಎಣ್ಣೆದೀಪ ( ಐದು ದಿನ) ಹಚ್ಚಿಡಬೇಕು. ಒಂದೆಡೆ ಮನುಷ್ಯ ಸಮುದ್ರ ತಳವನ್ನು ಶೋದಿಸುತ್ತಿದ್ದರೆ, ಇನ್ನೊಂದೆಡೆ ಮಂಗಳನತ್ತ ಹಾರಲು ರೆಡಿಯಾಗುತ್ತಿದ್ದಾನೆ. ಆದರೆ ಮೌಢ್ಯವಾದಿಗಳ ಸಂಚಿನಲ್ಲಿ ಬೀಳುವ ಜನ ಮಾತ್ರ ಇಂತಹ ಮೂಡನಂಬಿಕೆಗಳಿಗೆ ಈಡಾಗುತ್ತಿದ್ದಾರೆ. ಹಿನ್ನೆಲೆ : ಈ ಕೂಗು ಮಾರಿಯ ಹಾವಳಿ ವದಂತಿ ಹಬ್ಬಲು ಕಾರಣವಾದದ್ದು ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ 15 ದಿನಗಳ ಹಿಂದೆ ರಾತ್ರಿ ಯಾವುದೋ ಪ್ರಾಣಿ ದಾಳಿಯಿಟ್ಟು ಜನರನ್ನು ಗಾಯಗೊಳಿಸಿದ್ದು . ಸಂಗಾಪುರ ಗ್ರಾಮದಲ್ಲಿ ಹೊರಗೆ ಮಲಗಿದದ ಜನರ ಮೇಲೆ ಮಧ್ಯರಾತ್ರಿ ವಿದ್ಯುತ್ ಇಲ್ಲದ ಹೊತ್ತಿನಲ್ಲಿ ಯಾವುದೋ ಪ್ರಾಣಿ ಎಕಕಾಲಕ್ಕೆ 10-15ಜನರನ್ನು ಕಚ್ಚಿ ಕ್ಷಣಾರ್ಧದಲ್ಲಿ ಮಾಯವಾಗಿತ್ತು, ಅದಾದ ಎರಡು ದಿನಗಳ ನಂತರವೂ ಇಂತಹದ್ದೆ ಘಟನೆ ಜರುಗಿ 7-8 ಜನರಿಗೆ ಕಚ್ಚಿದ ಘಟನೆ ಜರುಗಿತ್ತು. ಕಚ್ಚಿದ ಗುರುತ್ತು ನೋಡಿದ ವೈದ್ಯರು ಅದು ನಾಯಿ, ನರಿಯ ಹಲ್ಲುಗಳ ಗುರುತುಗಳಲ್ಲ ಎಂದಿದ್ದರು. ಗುಡ್ಡದ ಬಳಿ ಇರುವ ಗ್ರಾಮಗಲಿಗೆ ಆಗಾಗ್ಗೆ ರಾತ್ರಿ ಹೊತ್ತು ನರಿಗಳು ಬರುವುದಾದದರೂ ಜನರಿಗೆ ತೊಂದರೆ ಕೊಟ್ಟಿದ್ದು ಕಮ್ಮಿ. ಘಟನೆಯ ನಂತರ ಗ್ರಾಮದ ಹತ್ತಿರ ಅರಣ್ಯ ಇಲಾಖೆ ಕೂಡ ಸುಳಿಯಲಿಲ್ಲ. ಆದರೆ ಕಚ್ಚಿದ್ದು ನಿಜ ಯಾರು ಅಂತ ನೋಡೆ ಇಲ್ಲ. ನೋಡೋ ಹೊತ್ತಿಗೆ ನಾಪತ್ತೆ ಇದು ಕಚ್ಚಿಸಿಕೊಂಡವರ ಅಳಲು. ಸಂಗಾಪುರ ಗ್ರಾಮದಲ್ಲಿ ಒಂದು ವಿಚಿತ್ರ ರೀತಿಯ ಭಯ ಮನೆ ಮಾಡಿರುವ ಹೊತ್ತಿಗೆ ಇದು ಹಲವಾರು ರೂಪದಲ್ಲಿ ವದಂತಿಯಾಗಿ ಹಬ್ಬತೊಡಗಿತು. ಈ ಸಂದರ್ಭದಲ್ಲಿ ಮೌಡ್ಯವಾದಿ ಗಳು ಕೂಗುಮಾರಿ ಎಂಬ ಕಲ್ಪನಾ ರಾಕ್ಷಸಿಗೆ ಮತ್ತೆ ಧೂಳು ಒರೆಸಿ ಚಲಾವಣೆಗೆಎ ಬಿಟ್ಟಿದ್ದಾರೆ. ಗಂಗಾವತಿಯಲ್ಲಿ ಕೂಗುಮಾರಿಯ ಚರ್ಚೆ ಮನನೆ ಮನೆಗಳಲ್ಲಿ ಜರುಗಿದಂತೆ ಬಾಗಿಲಿಗೆ ನಾಳೆ ಬಾ ಎಂದು ಬರೆಯುವುದು ರಾತ್ರಿ ಮನೆ ಮುಂದೆ ದೀಪ ಹಚ್ಚುವುದು ಆರಂಭಗೊಂಡು ಅದು ಕಾರಟಗಿ, ಸಿಂದನೂರುವರೆಗೆ ಹಬ್ಬಿದೆ. ನಂತರ ಹೊಸಪೇಟೆ ಬಳ್ಳಾರಿಯಲ್ಲೂ ಕೂಗುಮಾರಿ ಪ್ರಸಿದ್ದಿಯಾದಂತೆಈಗ ಆ ವದಂತಿ ಕೊಪ್ಪಳದಲ್ಲಿಯೂ ಹಬ್ಬಿದ್ದು ಜನ ಸುಮ್ಮನೆ ಭಯಬೀತರಾಗಿದ್ದಾರೆ. ಕೊಪ್ಪಳ ನಗರದ ಕೆಲ ಓಣಿಗಳಲ್ಲಿ ಕೆಲ ವಿದ್ಯಾವಂತರು ಮನೆಯಮುಂದೆ ದೀಪ ಹಚ್ಚಿ ಬಾಗಿಲಿಗೆ ನಾಳೆ ಬಾ ಎಂದು ಬರೆಯೋದು ನೋಡಿದರೆ ಕೂಗುಮಾರಿಗೆ ಕನ್ನಡ ಬರುತ್ತಾ?ಆಕೆ ರಾತ್ರಿ ಕೇವಲ ವಯಸ್ಕರ ಹೆಸರು ಕೂಗುವುದಾದದರೆ ಆಕೆಗೆ ಆ ಹೆಸರು ಹೇಗೆ ಗೊತ್ತಾಗುತ್ತೆ? ಮಕ್ಕಳ ಹೆಸರು ಕೂಗುವುದಾದರೆ ಅವರ ಹೆಸರು ಆಕೆಗೆ ತಿಳಿಯುವುದಾದರೂ ಹೇಗೆ? ಆಕೆಯ ಬಳಿ ಏನಾದರೂ ಕೊಪ್ಪಳದ ಮತದಾರರ ಪಟ್ಟಿ ಅಥವಾ ಪಡೀತರ ಚೀಟಿದಾರರ ಪಟ್ಟಿ ಇದೆಯಾ? |
|
ಹುಷಾರ್ .. ಕೂಗುಮಾರಿ ಬರ್ತಾಳೆ ! |
|
CONTACT USೊಗ: kannadanet.com Karishma Digital studio jawahar road, Koppal-583 231 ಕರಿಷ್ಮಾ ಡಿಜಿಟಲ್ಸ್, ಜವಾಹರ ರಸ್ತೆ, ದುರ್ಗಮ್ಮ ಕಟ್ಟೆ ಹತ್ತಿರ ,ಕೊಪ್ಪಳ Phone: 9880257488 E-mail: kannadanet@gmail.com,sirajbisaralli@in.com |