KOPPAL DIST COMPLETE INFORMATION AND NEWS

Text Box: 	ನಗರಸಭೆ ಕಮಿಷನರ್ ಅಣ್ಣಿಗೇರಿ 
ವರ್ಗಾವಣೆ ? 
ಕೊಪ್ಪಳ : ಕೊಪ್ಪಳ ನಗರಸಭೆಯಲ್ಲಿ  ಅಧ್ಯಕ್ಷ- ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ದಿನಗಳು ಹತ್ತಿರ ಬರುತ್ತಿದ್ದಂತೆ ನಗರಸಭೆ ಆಯುಕ್ತ ಪ್ರಭು ಅಣ್ಣಿಗೇರಿ ವರ್ಗಾವಣೆಗೊಂಡಿದ್ದಾರೆ. ಅಣ್ಣಿಗೇರಿ ವರ್ಗ ಆಗಿಲ್ಲ ಎಂದು  ಕೆಲವರ ವಾದ.
	ಅವರ ಜಾಗಕ್ಕೆ ಗದಗನ ಎ.ಹೆಚ್.ಬನಹಟ್ಟಿ ಎಂಬುವವರು ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ. ಅಣ್ಣಿಗೇರಿ ವರ್ಗ ನಗರಸಭೆಯಲ್ಲಿ ತೀವ್ರ ಅಚ್ಚರಿಗೆ ಕಾರಣವಾದರೆ ಅಣ್ಣಿಗೇರಿಗೆ ವರ್ಗಾವಣೆ ಈಗ್ಗೆ ಎರಡು ತಿಂಗಳ ಹಿಂದೆಯೇ ಆಗಿತ್ತು. ಆಗ ದಡಬಡಿಸಿ ಬೆಂಗಳೂರಿಗೆ ಹೋಗಿದ್ದ ಅಣ್ಣಿಗೇರಿ ಕೆಲವರನ್ನು ಭೇಟಿಯಾಗಿ ತಮ್ಮ ವರ್ಗಾವಣೆ ಆದೇಶವನ್ನು  ೨ ತಿಂಗಳ ಕಾಲ ತಡೆ ಹಾಕಿಸಿದ್ದರು.ಆದರೆ ಅಣ್ಣಿಗೇರಿ ಅಧಿಕಾರವನ್ನು ಬನಹಟ್ಟಿಯವರಿಗೆ ಹಸ್ತಾಂತರಿಸಿಲ್ಲ. ಬದಲಾಗಿ ಜೆ  ಇ ರಂಗನಾಥ, ಕಮಿಷನರ್ ಅಣ್ಣಿಗೇರಿ ಬೆಂಗಳೂರಿನ ಸಭೆಗೆ(?) ತೆರಳಿದಾಗ ದಿಡೀರ್ ಎಂದು ಬನಹಟ್ಟಿ ಆಯುಕ್ತರ ಕುರ್ಚಿಯಲ್ಲಿ ಆಸೀನರಾಗಿದ್ದಾರೆ. ಎಂದು ನಗರಸಭೆ ಸದಸ್ಯರೊಬ್ಬರ ಅಭಿಪ್ರಾಯ. ಇವರಿಗೆ ಜಿಲ್ಲಾಧಿಕಾರಿಗಳ ಬೆಂಬಲವೂ ಇದ್ದು ಅವರ ಆದೇಶದ ಮೇರೆಗೆ ಅಧಿಕಾರ ಸ್ವೀಕರಿಸಿದ್ದಾರೆ.
ಅಧ್ಯಕ್ಷ- ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸವೇ ಈಗ ನಗರಸಭೆ ಸಿಬ್ಬಂದಿ ಕೆಲಸ ಬಿಟ್ಟು ಹರಟೆ ಹೊಡೆಯಲು ಕಾರಣವಾಗಿದ್ದರೆ ಈಗ ಅಣ್ಣಿಗೇರಿ-ಬನಹಟ್ಟಿಗಳ ಅಧಿಕಾರದ  ಚರ್ಚೆಯೂ ಸೇರಿ ಈಗ ನಗರಸಭೆ ಸಿಬ್ಬಂದಿಗೆ ಹರಟೆಯ ಮಧ್ಯೆ ಕೆಲಸ ಮಾಡಲು ಟೈಂ ಇಲ್ಲದಂತಾಗಿದೆ.

ದನದ ಮಾಂಸ ಮಾರಾಟ ವಿರುದ್ದ ಪ್ರತಿಭಟನೆ,ಬಂಧನ

ಗಂಗಾವತಿ : ಬಕ್ರೀದ್ ಹಬ್ಬದ ನಿಮಿತ್ಯ  ನಗರದಲ್ಲಿ ಎರಡು ದಿನ ದನದ ಮಾಂಸ ಮಾರಾಟಕ್ಕೆ ಅವಕಾಶ ನೀಡಿರುವದನ್ನು ಖಂಡಿಸಿ  ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

             ಪ್ರತಿಭಟನಾ ನಿರತ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ  ಮಾತಿನ ಚಕಮಕಿ ನಡೆಯಿತು. ತಹಶೀಲ್ದಾರರು ಪ್ರತಿವರ್ಷದಂತೆ ಈ ವರ್ಷವೂ ದನದ ಮಾಂಸ ಮಾರಾಟಕ್ಕೆ ಅವಕಾಶ ನೀಡಿರುವುದಾಗಿ ತಮ್ಮ ಕ್ರಮವನ್ನು ಸಮರ್ಥಸಿಕೊಂಡರು. ಆದರೆ ಪ್ರತಿಭಟನಾಕಾರರು ತಹಶೀಲ್ದಾರರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ರಸ್ತೆ ತಡೆ ನಡೆಸಿದರು.  ಪ್ರಕ್ಷ್ಯುಬ್ದ ವಾತಾವರಣ ನಿರ್ಮಾಣವಾಗಿದ್ದರಿಂದ  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಚಾಲಕ ಸೇರಿದಂತೆ 15 ಜನರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.         ದನದ ಮಾಂಸ ಮಾರಾಟಕ್ಕೆ ಅನುಮತಿನೀಡಿರುವುದು ಮತ್ತು  ಪೊಲೀಸರ ದೌರ್ಜನ್ಯ ಖಂಡಿಸಿ ಇಂದು ಗಂಗಾವತಿ ನಗರ ಬಂದ್  ಆಚರಿಸಲಾಗುವುದು ಎಂದು ಹಿಂದೂ ಜಾಗರಣಾ ವೇದಿಕೆ ಸಂಚಾಲಕರು ತಿಳಿಸಿದ್ದಾರೆ.

 ಎಲ್ಲಡೆ ಸಂಭ್ರಮದ ಬಕ್ರೀದ್ ಆಚರಣೆ

ಕೊಪ್ಪಳ : ಜಿಲ್ಲೆಯ ಎಲ್ಲೆಡೆ ಸಂಭ್ರದಿಂದ ಬಕ್ರೀದ್ ಹಬ್ಬವನ್ನು  ಆಚರಿಸಲಾಯಿತು. ಕೊಪ್ಪಳದ  ಈದ್ಗಾ ಮೈದಾನದಲ್ಲಿ ಶಾಸಕ ಸಂಗಣ್ಣ ಕರಡಿ, ಮಾಜಿ ಶಾಸಕ ಬಸವರಾಜ ಹಿಟ್ನಾಳ ಮತ್ತಿತರ ನಾಯಕರು ಸಾಮೂಹಿಕ  ಪ್ರಾರ್ಥನೆ ಸಂದರ್ಭದಲ್ಲಿ    ಎಲ್ಲರಿಗೆ ಶುಭಕೋರಿದರು.

ಅದರ ಸೈಡ್ ಎಪೆಕ್ಟ್ ಅಂದೇ ಮದ್ಯಾಹ್ನ ಕಾಂಗ್ರೆಸ್ ಪಕ್ಷದಲ್ಲಿ ಆಗಿದ್ದು, ಪಕ್ಷೇತರ ಸದಸ್ಯನ ಮೇಲೆ ಹಲ್ಲೆ ನಡೆಸಿದ ಕಾಂಗ್ರೆಸ್ ಕೌನ್ಸಿಲರ್ ಗಳ ಕೃತ್ಯವೇ ಈಗ ದಾಳವಾಗುತ್ತಿದೆ ಸದರಿ ಘಟನೆಯನ್ನು ಬಸವರಾಜ ಹಿಟ್ನಾಳ ವಿರುದ್ದ ದಾಳವಾಗಿ ಬಳಸುತ್ತಿರುವ ಕೊಪ್ಪಲ ಕಾಂಗ್ರೆಸ್ ನ  ಇನ್ನೊಂದು ಬಣ ಡಿಸೆಂಬರ್ 2 ರಂದು ರಾತ್ರಿ ನಗರದ ಬಿ.ಟಿ.ಪಾಟೀನಲ ನಗರದ ಮನೆಯೊಂದರಲ್ಲಿ ರಹಷ್ಯ ಸಭೆ ನಡೆಸಿದೆ.

              ಆ ಸಭೆಯಲ್ಲಿ ಮಾಜಿ ಎಂ.ಎಲ್ ಸಿ , ಬ್ಲಾಕ್  ಕಾಂಗ್ರೆಸ್ ನ ಮಾಜಿ ಅಧ್ಯಕ್ಷರು, ಇಬ್ಬರು ಕೌನ್ಸಿಲರ್ ಗಳನು ಸೇರಿದಂತೆ  ಕಾಂಗ್ರೆಸ್ ನ  ಇತರೆ ಗುವುದು ಖಚಿತ.                    ಮುಖಂಡರು ಹಾಜರಿದ್ದರೆಂದು ತಿಳಿದು ಬಂದಿದೆ. ಡಿಸೆಂಬರ್ 2 ರಂದು ನಗರಸಭೆಯಲ್ಲಿ ಜರುಗಿದ ಘಟನೆಯಿಂದ ಕಾಂಗ್ರೆಸ್ ಪಕ್ಷದ ಮಾನ ಹರಾಜಾಗಿದೆ ಎಂದು ಕಥೆ ಹೆಣೆದು ಸದರಿ ಘಟನೆಗೆ ಮಾಜಿ ಶಾಸಕ ಬಸವರಾಜ ಹಿಟ್ನಾಳರೇ ನೇರ ಕಾರಣ ಎಂಬರ್ಥದ ವರದಿ ಯನ್ನು ಸಿದ್ದಪಡಿಸಿ ಕೆಪಿಸಿಸಿಗೆ ಕಳಿಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದಿದೆ.

              ಕಳೆದ ಕೆಲ ವರ್ಷಗಳಿಂದ ಕಾಂಗ್ರೆಸ್ ನಲ್ಲಿರುವ ಗುಂಪುಗಾರಿಕೆಗೆ ಡಿಸೆಂಬರ್ 2 ರಂದು ನಗರಸಭೆಯಲ್ಲಿ ನಡೆದ ಘಟನೆ ರಾಜಕೀಯ  ಜಿದ್ದಾಜಿದ್ದಿ, ಮೇಲುಗೈ ಸಾಧಿಸಲು ಬಳಕೆಯಾಗುತ್ತಿರುವದು ಆರೋಗ್ಯಕರ ರಾಜಕಾರಣದ ಲಕ್ಷಣವಂತೂ ಅಲ್ಲ. ವಿಧಾನಪರಿಷತ್ತಿಗೆ ಚುನಾವಣೆಗಳು ಇರುವ ಸಂದರ್ಭದಲ್ಲಿಯೇ ಬಿಟಿಪಾಟೀಲನ ನಗರದಲ್ಲಿ  ನಡೆದ ಸಭೆಯ ವಿವರಗಳಿಂದ  ಎಂಎಲ್ ಸಿ ಚುನಾವಣೆಯಲ್ಲಿ ಅದರ ಪರಿಣಾಮ ಕೊಪ್ಪಳದಲ್ಲಿ ವ್ಯಕ್ತವಾಗಿದೆ

ಕೊಪ್ಪಳ  ನಗರಸಭೆ ಘಟನೆಯ ಸೈಡ್ ಎಫೆಕ್ಟ್

ಕೊಪ್ಪಳ,ಡಿ.೩೦-ಸಂಸ್ಕೃತಿಯೊಂದಿಗೆ ತಂದೆ ತಾತ, ಅಜ್ಜಂದಿರ ಬದುಕಿನ ಅವಲೋಕನವನ್ನು ಹಾಗೂ ಇತಿಹಾಸವನ್ನು ಇಂದಿನ ಯುವಕರು ಅನುಕರಣೆ ಮಾಡಿಕೊಳ್ಳಬೇಕು. ಮಾತೃ ಭಾಷೆ ಕನ್ನಡವನ್ನು ಹೆಚ್ಚು ಪ್ರೀತಿಸುವುದರೊಂದಿಗೆ ಬೆಳೆಸುವಂತಾಗಬೇಕು. ಭಾಷೆ ಬದುಕಿದರೆ ನಾಡು ಬದುಕುತ್ತದೆ ಎಂದು ದಲಿತ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಅಭಿಪ್ರಾಯ ವ್ಯಕ್ತಪಡಿಸಿದರು.

             ಅವರು ಬುಧವಾರದಂದು ಇಲ್ಲಿಗೆ ಸಮೀಪದ ಭಾಗ್ಯನಗರ ಗ್ರಾಮದ ಖೋಡೆ ಕಲ್ಯಾಣ ಮಂಟಪದಲ್ಲಿ ಕೊಪ್ಪಳ ತಾಲೂಕ ಕಸಾಪ  ಇವರ ಆಶ್ರಯದಲ್ಲಿ ಆಯೋಜಿಸಲಾದ ಕೊಪ್ಪಳ ತಾಲೂಕ ೨ನೇ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತ, ಈ ನಾಡಿನ ಶರಣರು, ದಾಸರು, ಋಮುನಿಗಳು ಹಾಗೂ ಕ್ರಾಂತಿಕಾರರು ನಾಡಿನ ಏಳಿಗೆಗಾಗಿ ಶ್ರಮಿಸಿದ್ದಾರೆ. ಆದರೆ ಯುವಕರು ಅದನ್ನು ಅನುಸರಿಸುತ್ತಿಲ್ಲ. ಹೀಗಾಗಿ ಕನ್ನಡದ ದೀಪ ಉರಿಯುತ್ತಿಲ್ಲ. ಬದಲಾಗಿ ಇಂಗ್ಲೀಷ್ ದೀಪ ಉರಿಯುವಂತಾಗಿದೆ. ಇಂಗ್ಲೀಷ್ ಭಾಷೆಯ ಕಲಿಕೆಗಾಗಿ ಕೇಂದ್ರ ಸರಕಾರ ೪೦೦ ಕೋಟಿ. ರೂ. ಕಾರಿಸಿದೆ. ಆದರೆ ಕನ್ನಡ ಭಾಷೆಗೆ ಸರಕಾರವೂ ಸಹ ಮಲತಾಯಿ ಧೋರಣೆ ತೋರುತ್ತಿದೆ.

             ಕನ್ನಡಿಗರೆಲ್ಲ ಉದಾರಿಗಳು. ಅನ್ಯ ಭಾಷಾ ವ್ಯಾಮೋಹಕ್ಕೊಳಗಾಗಿದ್ದೇವೆ. ಅಪ್ಪ-ಅಮ್ಮ ಬದಲು ಮಮ್ಮಿ-ಡ್ಯಾಡಿ ಸಂಸ್ಕೃತಿಗೆ ಬದ್ಧರಾಗಿದ್ದೇವೆ. ನಾವು ಬದುಕಬೇಕಾದರೆ ಮೊದಲು ಕನ್ನಡ ಭಾಷೆಯನ್ನು ಬದುಕಿಸಬೇಕು. ಬ್ರೆಡ್‌ನಿಂದ್ ಬೆಡ್‌ವರೆಗೆ ಅಂದರೆ ಬೆಳಿಗ್ಗೆಂದ ರಾತ್ರಿ ಮಲಗುವವರೆಗೆ ಬರೀ ಇಂಗ್ಲೀಷ್ ಪದ ಬಳಸುತ್ತಿದ್ದೇವೆ. ಎಲ್ಲ ಇಂಗ್ಲೀಷ್‌ಮಯವಾಗಿದೆ. ಬದಲಾಗಿ ಕನ್ನಡ ಮಾಯವಾಗುತ್ತಿದೆ. ಇದು ಕಳವಳಕಾರಿ. ಕನ್ನಡ ಬದುಕನ್ನು ಕಳೆದುಕೊಳ್ಳುತ್ತಿದ್ದೇವೆ. ಕನ್ನಡ ದೀಪಕ್ಕೆ ಬತ್ತಿ ಇಲ್ಲ ಎಣ್ಣೆ ಇಲ್ಲದಂತಾಗಿದೆ. ಅದನ್ನು ನಾವೆಲ್ಲರೂ ಒಟ್ಟಾಗಿ ಪೂರೈಸಬೇಕು ಕನ್ನಡ ದೀಪ ಬೆಳಗಿಸಬೇಕು ಎಂದರು.

             ಆಂದ್ರ, ತ"ಳುನಾಡು ಮಹಾರಾಷ್ಟ್ರ ಸೇರಿದಂತೆ ದೇಶದ ಇತರ ರಾಜ್ಯಗಳಲ್ಲಿ ಅವರವರ ಭಾಷೆ ಬಳಸಲಾಗುತ್ತಿದೆ. ಆದರೆ ಕರ್ನಾಟಕದ    ಬಳ್ಳಾರಿ ರಾಯಚೂರು ಜಿಲ್ಲೆಗಳಲ್ಲಿ ತೆಲುಗು, ಬೆಳಗಾಂವ್ ಕಾರವಾರ ಜಿಲ್ಲೆಗಳಲ್ಲಿ ಮರಾಠಿ ಹೀಗೆ ಗಡಿ ಭಾಗದ ಜಿಲ್ಲೆಗಳು ಪರಭಾಷೆ ಬಳಸಿದರೆ ಕನ್ನಡದ ಉಳಿವು ಹೇಗಾದೀತು. ಮೊದಲು ನಮ್ಮ ತಾಯನ್ನು ಗೌರವಿಸೋಣ. ಜನಸಾಮಾನ್ಯರಿಂದ ಜನಪ್ರತಿನಿಧಿಗಳವರೆಗೆ ಕನ್ನಡಾಭಿಮಾನ ಬೆಳೆಯಬೇಕು; ಮೊಳಗಬೇಕು.

             ಕನ್ನಡಕ್ಕೆ ಏಳು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಅದೆ ಕನ್ನಡ ನಾಡಿನಲ್ಲಿ ಚಿನ್ನದ ಗಣಿಗಳಿವೆ. ಗ್ರಾನೈಟ್ ಉಕ್ಕಿನ ಅದಿರಿನ ಸಂಪತ್ತಿದೆ. ಗಂಧದ ಮಹಾ ನಿಧಿದೆ. ಕರಾವಳಿ ಜಲಪಾತ ನೀರು ಮಣ್ಣು ಸೇರಿದಂತೆ ಅಪಾರ ಸಂಪತ್ತಿದೆ. ಆದರೆ ಭಾಷೆಗೆ ಕುಂದು ಬರುತ್ತಿದೆ. ಇಂಥ ಸಂಪದ್ಭರಿತ ನಾಡಲ್ಲಿ ಜಾಗತೀಕರಣದಿಂದ ಭಾಷೆ ಮುಳುಗಬಾರದು ಎಂದು ಕರೆ ನೀಡಿದರು.

             ಸಮ್ಮೇಳನದ ಸರ್ವಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಬಿ.ಸಿ. ಪಾಟೀಲ ವಹಿಸಿದ್ದರು. ಸ್ಮರಣ ಸಂಚಿಕೆಯನ್ನು ಜಿ.ಪಂ. ಅಧ್ಯಕ್ಷ ರಾಘವೇಂದ್ರ ಹಿಟ್ನಾಳ ಬಿಡುಗಡೆಗೊಳಿಸಿದರು. ಕಸಾಪ ತಾಲೂಕ ಅಧ್ಯಕ್ಷ ಜಿ.ಎಸ್. ಗೋನಾಳ ಸ್ವಾಗತಿಸಿದರು. ಪ್ರ. ಕಾರ್ಯದರ್ಶಿ ಮಂಜುನಾಥ ಗೊಂಡಬಾಳ ವಂದಿಸಿದರು. ಮೊದಲಿಗೆ ರಾಷ್ಟ್ರ ಧ್ವಜಾರೋಹಣವನ್ನು ರಾಘವೇಂದ್ರ  ಹಿಟ್ನಾಳ ನೆರವೇರಿಸಿದರು. ಕನ್ನಡ ಧ್ವಜಾರೋಹಣವನ್ನು ಕಸಾಪ ಜಿಲ್ಲಾಧ್ಯಕ್ಷ ಶೇಕರಗೌಡ ಮಾಲಿಪಾಟೀಲ ನೆರವೇರಿಸಿದರು. ಪರಿಷತ್ ಧ್ವಜಾರೋಹಣವನ್ನು ಜಿ.ಎಸ್. ಗೋನಾಳ ಮಾಡಿದರು.

             ಈ ಸಂದರ್ಭದಲ್ಲಿ ಅಲ್ಲಮಪ್ರಭು ಬೆಟ್ಟದೂರು, ಸಾಹಿತಿ ಡಾ. ವಿ.ಬಿ ರಡ್ಡೇರ, ಜಿ.ಪಂ. ಸದಸ್ಯ ಪ್ರಸನ್ನ ಗಡಾದ, ಯಮನಪ್ಪ ಕಬ್ಬೇರ, ಗ್ರಾ.ಪಂ. ಅಧ್ಯಕ್ಷ ಶಂಕರ ಲಿಂಗನಬಂಡಿ, ಉಪಾಧ್ಯಕ್ಷೆ ಈರಮ್ಮ ಕಾಕಿ, ಗ್ರಾ.ಪಂ. ಸದಸ್ಯರಾದ ದಾನಪ್ಪ ಕವಲೂರು, ಭೋಗಪ್ಪ ಡಾಣಿ, ಚಂದ್ರಶೇಖರ ಹಾದಿಮನಿ, ವಾಣಿಜ್ಯೋದ್ಯಮಿ  ಶ್ರೀನಿವಾಸ ಗುಪ್ತಾ, ಹಿರಿಯ ಸಾಹಿತಿ ಗಳಾದ ಎಚ್.ಎಸ್. ಪಾಟೀಲ, ವಿಠ್ಠಪ್ಪ ಗೋರಂಟ್ಲಿ, ಎ.ಎಂ. ಮದರಿ, ರಾಜಶೇಖರ ಅಂಗಡಿ, ವೀರಣ್ಣ ವಾಲಿ, ಶಿವಾನಂದ ಹೊದ್ಲೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.

             ಮೊದಲಿಗೆ ಸಂಗೀತ ದಿಗ್ಗಜ ಸಿ. ಅಶ್ವತ್ಥ ಹಾಗೂ ಹೆಸರಾಂತ ಚಿತ್ರ ನಟ ವಿಷ್ಣುವರ್ಧನ್ ನಿಧನ ನಿಮಿತ್ತ ಎರಡು ನಿಮಿಷ ಮೌನಾಚರಣೆ ಮಾಡಲಾತು.

ನಾವು ಬದುಕಬೇಕಾದರೆ ಮೊದಲು ಕನ್ನಡ ಭಾಷೆಯನ್ನು ಬದುಕಿಸಬೇಕು

-ಅರ್ಜುನ್ ಗೊಳಸಂಗಿ

CONTACT US:      kannadanet.com Karishma Digital studio jawahar road, Koppal-583 231

ಕರಿಷ್ಮಾ ಡಿಜಿಟಲ್ಸ್, ಜವಾಹರ ರಸ್ತೆ, ದುರ್ಗಮ್ಮ ಕಟ್ಟೆ ಹತ್ತಿರ ,ಕೊಪ್ಪಳ Phone: 9880257488 E-mail:   kannadanet@gmail.com,sirajbisaralli@in.com